ಬೆಂಗಳೂರು,ಜು. 15(DaijiworldNews/AK): ಜಾರಿ ನಿರ್ದೇ ಶನಾಲಯದಿಂದ ಬಂಧನ ಭೀತಿಯಿಂದ ಎರಡು ತಲೆಮರೆಸಿಕೊಂಡಿದ್ದ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರು ಸೋಮವಾರ ಬೆಳಿಗ್ಗೆ ಆರಂಭವಾದ ವಿಧಾನಸಭೆ ಕಲಾಪಕ್ಕೆ ಹಾಜರಾಗಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದದ್ದಲ್ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ದಾಳಿಮಾಡಿದ್ದರು. ಎರಡು ದಿನಗಳ ಕಾಲ ಶೋ ಧ, ವಿಚಾರಣೆ ನಡೆಸಲಾಗಿತ್ತು.
ಶುಕ್ರವಾರ ವಿಶೇಷ ತನಿಖಾ ದಳದ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ದದ್ದಲ್, ಶನಿವಾರ ಮನೆಯಿಂದ ನಾಪತ್ತೆಯಾಗಿದ್ದರು.ವಿಧಾನಮಂಡಲ ಅಧಿವೇ ಶನದ ಅವಧಿಯಲ್ಲಿ ಶಾಸಕರನ್ನು ಬಂಧಿಸಬೇಕಾದರೆ ವಿಧಾನಸಭೆ ಅಧ್ಯಕ್ಷರ ಅನುಮತಿ ಅಗತ್ಯ.
ಸದನಕ್ಕೆ ಹಾಜರಾಗುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, 'ನಾನು ಎಲ್ಲಿಯೂತಲೆಮರೆಸಿಕೊಂಡಿರಲಿಲ್ಲ. ಊರಿಗೆಹೋ ಗಿದ್ದೆ. ಇ.ಡಿ ಅಧಿಕಾರಿಗಳು ನನಗೆ
ಯಾವುದೇ ನೋಟಿಸ್ ನೀಡಿಲ್ಲ ಎಂದರು ಹೇಳಿದರು.