ಬೆಂಗಳೂರು, ಜು 15(DaijiworldNews/ AK): ಅಂಕೋಲ ಸಮೀಪ ರಾಷ್ಟ್ರೀ ಯ ಹೆದ್ದಾರಿಯಲ್ಲಿ ಭೂಕುಸಿತದ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ವಿಧಾನಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು, ಭೂಕುಸಿತದಿಂದ ಡಾಬಾದ ನಾಲ್ಕು ಮಂದಿ ಮತ್ತು ಅನಿಲ ಟ್ಯಾಂಕ್ನ ಮೂರು ಮಂದಿ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಅವರು ಹೇಳಿದರು.