ಬೆಳಗಾವಿ, ಜು.21(DaijiworldNews/AK): ಕಾಂಗ್ರೆಸ್ನ ಡಿಎನ್ಎಯಲ್ಲೇ ಭ್ರಷ್ಟಾಚಾರವಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪರಮಭ್ರಷ್ಟರಾಗಿ ಹೊರಹೊಮ್ಮಿದ್ದಾರೆ. ಮುಡಾ ಮತ್ತುವಾಲ್ಮೀ ಕಿ ಅಭಿವೃದ್ಧಿ ನಿಗಮದ ಹಗರಣದಲ್ಲೂ ಅವರ ನೇರ ಹಸ್ತಕ್ಷೇ ಪ ಮತ್ತು ಆಶೀರ್ವಾದವಿದೆ. ಹಾಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಸಿಬಿಐ ತನಿಖೆ ಎದುರಿಸಬೇಕು ಎಂದು ಕೇಂ ದ್ರ ಸಚಿವ ಪ್ರಹ್ಲಾದ ಜೋ ಶಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸುಳ್ಳು ಭರವಸೆ ನೀಡಿ ಯಾವುದೇ ರೀತಿಯ ಮುಂದಾಲೋಚನೆ ಇಲ್ಲದೆ ಗ್ಯಾರಂಟಿ’ಯೋ ಜನೆ ಜಾರಿಗೊಳಿಸಿ ಪರದಾಡುತ್ತಿದೆ. ಹಿಂದಿನಿಂದಲೂ ಭ್ರಷ್ಟಾಚಾರದ ಲಕ್ಷಾಂತರ ಮೊಟ್ಟೆ ಇಟ್ಟು, ಅದಕ್ಕೆ ಕಾವು ಕೊಡುತ್ತ ಬಂದಿದೆ ಎಂದು ದೂರಿದರು.
ವಾಲ್ಮೀ ಕಿ ಅಭಿವೃದ್ಧಿ ನಿಗಮದ ವಿಚಾರವಾಗಿ ಸಿದ್ದರಾಮಯ್ಯ ಬಾಲಿಶವಾದ ಹೇ ಳಿಕೆ ಕೊಡುತ್ತಿದ್ದಾರೆ. ಒಂ ದುವೇ ಳೆ ಅಧಿಕಾರಿಗಳೇ ಅಕ್ರಮ ಎಸಗಿದ್ದರೆ, ಸಚಿವರಾಗಿದ್ದ ಬಿ.ನಾಗೇಂ ದ್ರ ಅವರಿಂ ದ ರಾಜೀ ನಾಮೆ ಏಕೆ ಪಡೆದಿದ್ದೀ ರಿ? ನೀವು ತಪ್ಪೇ ಮಾಡಿರದಿದ್ದರೆ ಸಿಬಿಐ ತನಿಖೆಗೇ ಕೆ ಹೆದರುತ್ತಿದ್ದೀ ರಿ ಎಂದು ಪ್ರಶ್ನಿಸಿದರು.