ಶ್ರೀನಗರ, ಜು.24(DaijiworldNews/AA): ಉಗ್ರರು ಮತ್ತು ಸೇನಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರದ ಕುಪ್ಪಾರದಲ್ಲಿ ಎನ್ಕೌಂಟರ್ ಮಾಡಲಾಗಿದೆ. ಈ ವೇಳೆ ಸೇನಾ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದೆ ಎಂದು ಭಾರತೀಯ ಸೇನೆ ಇಂದು ಮಾಹಿತಿ ನೀಡಿದೆ.
ಭಾರತೀಯ ಸೇನೆಯು ಕುಪ್ಪಾರ ಬಳಿ ಉಗ್ರರ ಚಲನವಲನಗಳ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯ ಆರಂಬಿಸಿತ್ತು. ಈ ವೇಳೆ ಉಗ್ರರು ಮತ್ತು ಸೇನಾ ಸಿಬ್ಬಂದಿ ನಡುವೆ ತೀವ್ರವಾದ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ಚಕಮಕಿಯಲ್ಲಿ ಓರ್ವ ಅಪರಿಚಿತ ಉಗ್ರ ಹತ್ಯೆಯಾಗಿದ್ದಾನೆ.
ಘಟನೆಯಲ್ಲಿ ಗಾಯಗೊಂಡಿರುವ ಸೇನಾ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಭಾರತೀಯ ಸೇನೆ ಹೇಳಿದೆ.