ಬೆಂಗಳೂರು, ಜು 25 (DaijiworldNews/ AK):ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತಮ್ಮ ಹುಳುಕನ್ನು ಮುಚ್ಚಿಟ್ಟುಕೊಳ್ಳಲು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ,ಬಿಜೆಪಿ, ಜೆಡಿಎಸ್ ಅಧಿಕಾರವಧಿಯಲ್ಲಿ ನಡೆದ ಅವ್ಯವಹಾರಗಳನ್ನೆಲ್ಲ ಬಯಲು ಮಾಡುತ್ತೇವೆ, ಮುಡಾ ಸೈಟು ಹಂಚಿಕೆಯ ಬಗ್ಗೆ ಅವರು ಈಗ ಮಾತಾಡುತ್ತಿದ್ದಾರೆ, ಎರಡು ವರ್ಷಗಳ ಹಿಂದೆಯೇ ವಿಷಯ ಪತ್ರಿಕೆಯಲ್ಲಿ ಬಂದಿತ್ತು, ಆಗ್ಯಾಕೆ ಅಧಿಕಾರದಲ್ಲಿದ್ದ ಬಿಜೆಪಿ ನಾಯಕರು ಮಾತಾಡಲಿಲ್ಲ ಎಂದು ಪ್ರಶ್ನಿಸಿದರು.
ಅಧಿವೇಶನ ಶುರುವಾಗಿ ಹತ್ತು ದಿನಗಳ ನಂತರ ಯಾಕೆ ಅವರು ಮುಡಾ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ? ಎಂದು ಶಿವಕುಮಾರ್ ಪ್ರಶ್ನಿಸಿದರು. ಅಷ್ಟಕ್ಕೂ ಸಿದ್ದರಾಮಯ್ಯ ಅವರಿಂದ ಅಕ್ರಮ ಎಲ್ಲಿ ನಡೆದಿದೆ? ಅವರು ಖರೀದಿಸಿದ ಜಮೀನನ್ನು ಮುಡಾ ಸ್ವಾಧೀನ ಮಾಡಿಕೊಂಡಿದೆ ಮತ್ತು ಬದಲೀ ಸೈಟುಗಳನ್ನು ಅವರಿಗೆ ನೀಡಿದೆ. ಆಗ ಅಧಿಕಾರದಲ್ಲಿ ಬಿಜೆಪಿ ಸರ್ಕಾರವೇ ಇತ್ತಲ್ಲ ಎಂದರು.