ಬೆಂಗಳೂರು,ಜು 26(DaijiworldNews/ AK):ಅಧಿವೇಶನದಲ್ಲಿ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷದವರು ಬೆಳಕು ಚೆಲ್ಲಿ ಚರ್ಚಿಸಿದರು ಕೂಡ ವಿರೋಧ ಪಕ್ಷದವರು ನೆಪಕ್ಕೂ ರಾಜ್ಯದ ಜನರ ಸಂಕಷ್ಟಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ ಎಂದು ಸಿಎಂ ವಿಪಕ್ಷಗಳ ನಡುವಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಅಧಿವೇಶನದಲ್ಲಿ ವಿರೋಧ ಪಕ್ಷಗಳ ಹೊಣೆಗೇಡಿತನವನ್ನು ಪ್ರತಿಕಾಗೋಷ್ಠಿಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟ ಸಿಎಂ, ಬಿಜೆಪಿ, ಜೆಡಿಎಸ್ ಹತಾಶರಾಗಿದ್ದಾರೆ. ನಾವು 135 ಸ್ಥಾನ ಗೆದ್ದ ಬಳಿಕ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ಕೊಡ್ತಾರೆ. ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಎರಡನೇ ಬಾರಿ ಸಿಎಂ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಎರಡು ವಾರವೂ ಅಧಿವೇಶದಲ್ಲಿ ವಾಲ್ಮೀಕಿ ನಿಗಮದ ಒಂದೇ ವಿಚಾರ ಪ್ರಸ್ತಾಪ ಆಗಿದೆ.ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ. ಆಡಳಿತ ಪಕ್ಷದ ಶಾಸಕರು ರಾಜ್ಯದ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿದರು.ಇದನ್ನೆಲ್ಲಾ ನೋಡಿದಾಗ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅಧಿವೇಶನವನ್ನು ದುರುಪಯೋಗ ಪಡಿಸಿಕೊಳ್ಳುವುದು ಬಿಟ್ಟರೆ ಬೇರೆ ಜನಪರವಾದ ಉದ್ದೇಶ ವಿರೋಧ ಪಕ್ಷಗಳಿಗೆ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ.ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಇವತ್ತಿನವರೆಗೆ ನನ್ನ ಮೇಲೆ ಸಣ್ಣ ಕಪ್ಪುಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ.
ಜನರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿ+ಜೆಡಿಎಸ್ ಲೋಕಸಭಾ ಚುನಾವಣೆಯಲ್ಲೂ ಹಿಂದಿನ ಬಾರಿಗಿಂತ ಹೆಚ್ಚು ಸೀಟು, ಮತ ಗಳಿಸಲು ಸಾದ್ಯವಾಗಲಿಲ್ಲ. ನಮಗೆ ಕಳೆದ ಲೋಕಸಭಾ ಚುನಾವಣೆಗಿಂತ ಶೇ13 ರಷ್ಟು ಮತಗಳನ್ನು ಈ ಚುನಾವಣೆಯಲ್ಲಿ ಹೆಚ್ಚು ಗಳಿಸಿದೆವು. ಇದರಿಂದ ಹತಾಶರಾಗಿ ಮತ್ತೆ ಜನರ ವಿಶ್ವಾಸ ಗಳಿಸಲು ತಪ್ಪು ದಾರಿಯಲ್ಲಿ ವಾಮ ಮಾರ್ಗ ಹಿಡಿದಿದ್ದಾರೆ ಎಂದು ಕಿಡಿಕಾರಿದರು.ಬಿಜೆಪಿ, ಜೆಡಿಎಸ್ ನವರ ಸುಳ್ಳುಗಳಿಗೆ ಅಧಿಕೃತ ದಾಖಲೆಗಳ ಮೂಲಕ ಕನ್ನಡಿ ಹಿಡಿದ ಸಿಎಂ ಸಿದ್ದರಾಮಯ್ಯ
ಯಾವುದೇ ಅಧಿಕೃತ ದಾಖಲೆಗಳಿಲ್ಲದೆ-ಅರೆ ಬರೆ ಪತ್ರಗಳನ್ನು ತೋರಿಸಿ ರಾಜ್ಯದ ಜನರ ಮುಂದೆ ಬಿಜೆಪಿ+ಜೆಡಿಎಸ್ ನಡೆಸಿದ ಜಂಟಿ ಡ್ರಾಮಾಗಳಿಗೆ ಅಧಿಕೃತ ದಾಖಲೆಗಳನ್ನು ಮುಂದಿಟ್ಟು ಸಿಎಂ ಕಿವಿ ಹಿಂಡಿದರು.
ಬಿಜೆಪಿ ಜೆಡಿಎಸ್ನವರ ಆರೋಪಗಳಿವು. ಇದಕ್ಕೆ ದಾಖಲೆಗಳನ್ನೂ ಕೂಡ ಬಿಡುಗಡೆ ಮಾಡುತ್ತಿದ್ದೇನೆ.ಕುಟುಂಬದವರನ್ನೇ ಎತ್ತಿಕಟ್ಟಿ ಕೊಳಕು ಮನೆ ಮುರುಕ ರಾಜಕಾರಣಕ್ಕಿಳಿದಿರುವುದಕ್ಕೆ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಸ್ವಯಾರ್ಜಿತ ಜಮೀನಾಗುತ್ತದೆಯೆ ಹೊರತು ಈ ಜಮೀನುಗಳ ಮೇಲೆ ಸರ್ಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಹಾಗಾಗಿ ಈ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ಕಾಯ್ದೆಯು ಸ್ಪಷ್ಟವಾಗಿ ಹೇಳುತ್ತದೆ. ಅಸಂಖ್ಯಾತ ತೀರ್ಪುಗಳೂ ಇವೆ.
ಬಿಜೆಪಿ+ಜೆಡಿಎಸ್ ರಾಜ್ಯದ ಜನರಿಂದ ದಾಖಲೆಗಳನ್ನು ಮರೆ ಮಾಚಿ ಆಡಿದ ಜಂಟಿ ಕಪಟತನಕ್ಕೆ ದಾಖಲೆಗಳ ಮೂಲಕವೇ ಉತ್ತರ ಕೊಟ್ಟ ಸಿಎಂ ಸಿದ್ದರಾಮಯ್ಯ ಮೂಡಾ ಪ್ರಕರಣದ ಪ್ರತೀ ಪತ್ರಗಳು, ಪ್ರತೀ ದಾಖಲೆಗಳನ್ನು ರಾಜ್ಯದ ಜನತೆಯ ಮುಂದೆ ಮಂಡಿಸಿದ ಸಿಎಂಬಿಜೆಪಿ+ಜೆಡಿಎಸ್ ಜಂಟಿ ಸುಳ್ಳುಗಳಿಗೆ ಬಿಜೆಪಿ ಜೆಡಿಎಸ್ ಸದಸ್ಯರ ಸಮ್ಮುಖದಲ್ಲೇ ಆಗಿರುವ ಮೂಡಾ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ಓದಿದ ಸಿಎಂ ಆಗ ಮೂಡದಲ್ಲಿದ್ದ ರಾಮದಾಸ್, ನಾಗೇಂದ್ರ, ಜಿಟಿ ದೇವೇಗೌಡ ಯಾವ ಪಕ್ಷದವರು? ಪ್ರಶ್ನೆ ಮುಂದಿಟ್ಟ ಸಿಎಂ
ನಾವೇನು ಇಂಥಾ ಜಾಗದಲ್ಲೇ ನಿವೇಶನ ಕೇಳಿಲ್ಲ. ಬಿಜೆಪಿಯವರ ಅವಧಿಯಲ್ಲೇ ಅವರೇ ನಿರ್ಣಯ ಕೈಗೊಂಡು ಕೊಟ್ಟಿರುವ ನಿವೇಶನ ಇದು. ಮತ್ತೇಕೆ ರಾಜ್ಯದ ಜನತೆಯ ಮುಂದೆ ಸುಳ್ಳು ಹೇಳಿ ಸಿಕ್ಕಿಕೊಳ್ಳುತ್ತಿದ್ದೀರಿ ಸಿಎಂ ಪ್ರಶ್ನೆ.ಕುಟುಂಬದಲ್ಲಿ ಅನ್ಯೋನ್ಯರಾಗಿದ್ದವರನ್ನು ಪರಸ್ಪರ ಎತ್ತಿ ಕಟ್ಟಿ ಮನೆ ಮುರುಕ ರಾಜಕಾರಣ ಮಾಡಿದರೆ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಸಹಿಸಲ್ಲ.ಇದರಲ್ಲಿ ನನ್ನದಾಗಲಿ, ನಮ್ಮ ಪತ್ನಿಯವರದ್ದಾಗಲಿ, ನಮ್ಮ ಬಾಮೈದುನನ ಪಾತ್ರ ಎಲ್ಲಿದೆ ಹೇಳಿ?: ದಾಖಲೆಗಳನ್ನು ಮುಂದಿಟ್ಟು ಪ್ರಶ್ನಿಸಿದ ಸಿಎಂ. ಬಿಜೆಪಿ ಮತ್ತು ಜೆಡಿಎಸ್ ವಿವಾದ ಅಲ್ಲದ್ದನ್ನು ಕೃತಕವಾಗಿ ವಿವಾದವನ್ನಾಗಿಸಲು ಬಿಜೆಪಿ+ಜೆಡಿಎಸ್ ಪಾರ್ಲಿಮೆಂಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಜೆಡಿಎಸ್ ಸಂಸದರು ರಾಜ್ಯದ ಏಳೂವರೆ ಕೋಟಿ ಜನರಿಗೆ ಆಗಿರುವ ಅನ್ಯಾಯದ ಬಗ್ಗೆ ನೆಪಕ್ಕೂ ಪಾರ್ಲಿಮೆಂಟಿನಲ್ಲಿ ಪ್ರಶ್ನೆ ಮಾಡಿಲ್ಲ ಏಕೆ?ಇಲ್ಲಿ ವಿಧಾನಸಭೆಯನ್ನು ಅವರ ರಾಜಕಾರಣಕ್ಕೆ ಬಳಸಿಕೊಂಡರು , ಈಗ ಪಾರ್ಲಿಮೆಂಟನ್ನೂ ಬಳಸಿಕೊಳ್ಳುತ್ತಿದ್ದಾರೆ
ಬಿಜೆಪಿ+ ಜೆಡಿಎಸ್ ಮುಖಂಡರು ಮೂಡಾದಿಂದ ಪಡೆದಿರುವ ಸೈಟ್ ಗಳ ವಿವರ ಮತ್ತು ಹೆಸರನ್ನು ಸಚಿವ ಬೈರತಿ ಸುರೇಶ್ ಓದಿ ದಾಖಲೆ ಮುಂದಿಟ್ಟರು.