ನವದೆಹಲಿ, ಜು.27(DaijiworldNews/AA): ಜಮ್ಮು-ಕಾಶ್ಮೀರ ಗಡಿ ಭಾಗದಲ್ಲಿ ಇತ್ತೀಚೆಗೆ ಉಗ್ರರ ದಾಳಿ ಹೆಚ್ಚಾಗುತ್ತಿದ್ದು, ಸೇನಾ ಸಿಬ್ಬಂದಿ ಹಾಗೂ ವಲಸಿಗರನ್ನು ಗುರಿಯಾಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ಮಧ್ಯೆ ಜಮ್ಮು-ಕಾಶ್ಮೀರ ಗಡಿಯಲ್ಲಿ ಹೆಚ್ಚುವರಿಯಾಗಿ 2 ಸಾವಿರ ಸೈನಿಕರನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜಮ್ಮು-ಕಾಶ್ಮೀರದ ಗಡಿಯಲ್ಲಿ ಹೆಚ್ಚುವರಿಯಾಗಿ 2 ಸಾವಿರ ಗಡಿ ಭದ್ರತಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಇತ್ತೀಚೆಗೆ, ಗಡಿಯಲ್ಲಿ ಉಗ್ರರ ಉಪಟಳ, ಒಳನುಸುಳುವಿಕೆ, ದಾಳಿ, ಶಸ್ತ್ರಾಸ್ತ್ರ ಸಾಗಣೆ ಸೇರಿ ಉಗ್ರರ ಹಲವು ಕೃತ್ಯಗಳು ಜಾಸ್ತಿಯಾಗಿರುವುದರಿಂದ ಹೆಚ್ಚಿನ ಭದ್ರತೆಗಾಗಿ ಬಿಎಸ್ಎಫ್ ಯೋಧರನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ಇನ್ನು ಕೇಂದ್ರ ಸರ್ಕಾರದಿಂದ ಅಷ್ಟೇ ಅಲ್ಲದೇ ಪಾಕಿಸ್ತಾನವು ಗಡಿಯಲ್ಲಿ ಎರಡು ಹೆಚ್ಚುವರಿ ಬ್ರಿಗೇಡ್ಗಳು, 3 ಪಿಒಕೆ ಬ್ರಿಗೇಡ್ ಹಾಗೂ 2 ಹೆಚ್ಚುವರಿ ಪಿಒಕೆ ಬ್ರಿಗೇಡ್ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ ಎಂದು ತಿಳಿದುಬಂದಿದೆ.