ಹರಿಯಾಣ, ಆ.02DaijiworldNews/AA): ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಕೆಲವು ಅಭ್ಯರ್ಥಿಗಳು ಅದರಲ್ಲಿ ಯಶಸ್ವಿಯಾಗಲು ಇಂಗ್ಲಿಷ್ ಮಾಧ್ಯಮದಲ್ಲಿ ಓದುವುದು ಅಗತ್ಯ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಹಾಗಲ್ಲ ಅನ್ನುವುದಕ್ಕೆ ಐಎಎಸ್ ಹಿಮಾಂಶು ನಾಗ್ಪಾಲ್ ಅವರ ಯಶಸ್ಸಿನ ಕಥೆಯೇ ಸಾಕ್ಷಿ.
ಹಿಮಾಂಶು ನಾಗ್ಪಾಲ್ ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಹಂಸಿ ನಿವಾಸಿ. 1996ರ ಆಗಸ್ಟ್ 12ರಂದು ಜನಿಸಿದ ಅವರು, ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು.
ಹಿಮಾಂಶು ನಾಗ್ಪಾಲ್ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿವರೆಗೆ ಓದಿದರು. ಇದಾದ ಬಳಿಕ ಖಾಸಗಿ ಶಾಲೆಯೊಂದರಲ್ಲಿ ಅವರ ಅಡ್ಮಿಷನ್ ಆಯಿತು. 12ನೇ ತರಗತಿವರೆಗೆ ಹಿಂದಿ ಮಾಧ್ಯಮದಲ್ಲಿ ಓದಿದ ಅವರು, ಹಿಮಾಂಶು 10ನೇ ತರಗತಿಯಲ್ಲಿ 80% ಮತ್ತು 12ನೇ ತರಗತಿಯಲ್ಲಿ 97% ಅಂಕಗಳನ್ನು ಪಡೆದಿದ್ದರು. ಅವರು ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಲ್ಲಿ ಬಿಕಾಂ ಆನರ್ಸ್ ಮಾಡಿದ್ದಾರೆ.
ಹಂಸರಾಜ್ ಕಾಲೇಜಿನಲ್ಲಿ ಅಡ್ಮಿಷನ್ ಆಗುವ ವೇಳೆಗೆ ಹಿಮಾಂಶು ನಾಗ್ಪಾಲ್ ಅವರ ತಂದೆ ಅವರನ್ನು ಡ್ರಾಪ್ ಮಾಡಲು ಬಂದಿದ್ದರು. ನಂತರ ಬುಲೆಟಿನ್ ಬೋರ್ಡ್ ನಲ್ಲಿ ಟಾಪರ್ ಗಳ ಹೆಸರನ್ನು ನೋಡಿದ ಅವರು ಹಿಮಾಂಶು ಅವರ ಹೆಸರನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಪಘಾತವೊಂದರಲ್ಲಿ ಹಿಮಾಂಶು ಅವರ ತಂದೆ ನಿಧನರಾಗುತ್ತಾರೆ.
ತಂದೆಯ ನಿಧನದ ಕೆಲವು ತಿಂಗಳ ನಂತರ, ಹಿಮಾಂಶುವಿನ ಅಣ್ಣ ಕೂಡ ಹಠಾತ್ ನಿಧನರಾದರು. ಈ ಎರಡು ಆಘಾತಗಳಿಂದ ಅವರು ಕುಗ್ಗಿ ಹೋಗಿದ್ದರು. ಆದರೆ ತಾಯಿ ಮತ್ತು ಚಿಕ್ಕಪ್ಪನ ಬೆಂಬಲದಿಂದ ಅವನು ತನ್ನ ಅಧ್ಯಯನವನ್ನು ಮುಂದುವರೆಸಿದರು.
ಕಾಲೇಜಿನಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ವಾಸ್ತವವಾಗಿ, ಅವರು ಮೊದಲಿನಿಂದಲೂ ಹಿಂದಿ ಮಾಧ್ಯಮದಲ್ಲಿ ಓದುತ್ತಿದ್ದರು, ಆದರೆ ಕಾಲೇಜು ಸಂಪೂರ್ಣವಾಗಿ ಇಂಗ್ಲಿಷ್ ಮಾಧ್ಯಮವಾಗಿತ್ತು. ಕಾಲೇಜಿನಲ್ಲಿ ಯಾರೊಂದಿಗೂ ಮಾತನಾಡಲು ಹಿಂಜರಿಯುತ್ತಿದ್ದರು. ತರಗತಿಯಲ್ಲಿ ಅವರನ್ನು ಕೆಲವರು ಗೇಲಿ ಮಾಡುತ್ತಿದ್ದರು. ಆದರೆ ಅವರು ಧೈರ್ಯಗೆಡದೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು.
ಹಿಮಾಂಶು ನಾಗ್ಪಾಲ್ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ. ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಸ್ವಯಂ ಅಧ್ಯಯನದ ಮೂಲಕ ಯುಪಿಎಸ್ಸಿ ಪರೀಕ್ಷೆಯಲ್ಲಿ 26ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ 22ನೇ ವಯಸ್ಸಿಗೆ ಯುಪಿಎಸ್ಸಿ ಪರೀಕ್ಷೆ ಪಾಸ್ ಆಗುವುದರಲ್ಲಿ ಸಫಲರಾಗುತ್ತದೆ.
ಹಿಮಾಂಶು ನಾಗ್ಪಾಲ್ ತಮ್ಮ ಸರ್ಕಾರಿ ಕೆಲಸವನ್ನು ಸಹರಾನ್ ಪುರದಿಂದ ಪ್ರಾರಂಭಿಸಿದರು. ಇದಾದ ನಂತರ ಅವರು ಜೌನ್ ಪುರ ಮತ್ತು ಕಾನ್ಪುರದಲ್ಲಿ ಪೋಸ್ಟಿಂಗ್ ಪಡೆದರು. ಪ್ರಸ್ತುತ ಅವರು ವಾರಣಾಸಿಯಲ್ಲಿ ಸಿಡಿಒ ಆಗಿ ಕೆಲಸ ಮಾಡುತ್ತಿದ್ದಾರೆ.
ಹಿಮಾಂಶು ನಾಗ್ಪಾಲ್ ತಮ್ಮ ಸರ್ಕಾರಿ ಕೆಲಸವನ್ನು ಸಹರಾನ್ ಪುರದಿಂದ ಪ್ರಾರಂಭಿಸಿದರು. ಇದಾದ ನಂತರ ಅವರು ಜೌನ್ ಪುರ ಮತ್ತು ಕಾನ್ಪುರದಲ್ಲಿ ಪೋಸ್ಟಿಂಗ್ ಪಡೆದರು. ಪ್ರಸ್ತುತ ಅವರು ವಾರಣಾಸಿಯಲ್ಲಿ ಸಿಡಿಒ ಆಗಿ ಕೆಲಸ ಮಾಡುತ್ತಿದ್ದಾರೆ.
ಇಂಗ್ಲಿಷ್ ಭಾಷೆಯ ಮೇಲೆ ಬಲವಾದ ಹಿಡಿತವನ್ನು ಹೊಂದಿಲ್ಲದಿದ್ದರೂ, ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಹಿಂದಿ ಭಾಷೆಯನ್ನು ತಮ್ಮ ಯಶಸ್ಸಿಗೆ ಅಡ್ಡಿ ಎಂದು ಪರಿಗಣಿಸುವ ಅಭ್ಯರ್ಥಿಗಳಿಗೆ ಹಿಮಾಂಶು ಅವರ ಜೀವನ ಕಥೆಯು ಸ್ಫೂರ್ತಿಯಾಗಿದೆ.