ಬಿಹಾರ, ಆ 3(DaijiworldNews/ AK): ಇದು ಬಿಹಾರದ ರಾಜಧಾನಿ ಪಾಟ್ನಾದ ಬಿಶುನ್ ಪುರ ಪಕ್ಡಿ ಎಂಬ ಹಳ್ಳಿಯ ಹುಡುಗನ ಕಥೆ.
ಕಿಡಿಗೇಡಿಯಾಗಿದ್ದ ಹುಡುಗ ಈಗ ದೊಡ್ಡ ಅಧಿಕಾರಿಯಾಗಿರುವುದು ಹಳ್ಳಿಯ ಜನಕ್ಕೆ ನಂಬಲೂ ಅಸಾಧ್ಯವಾಗಿದೆ. ಮೊದಲು ಇಂಜಿನಿಯರ್ ಆದ ಆದಿತ್ಯ ನಂತರ ಎಂಬಿಎ ಪದವಿ ಪಡೆದರು. ಇದು ಅವರಿಗೆ ತೃಪ್ತಿ ನೀಡದಿದ್ದಾಗ, ಅವರು UPSC ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಆರಂಭಿಸಿದರು. ಅಂತಿಮವಾಗಿ IAS ಅಧಿಕಾರಿಯಾಗಿದ್ದಾರೆ.
12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ, ಆದಿತ್ಯ ಪಾಂಡೆ ಪಂಜಾಬ್ ನಲ್ಲಿರುವ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಿಂದ ಬಿ.ಟೆಕ್ ಮಾಡಿದರು. ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ನಂತರ ಆದಿತ್ಯ ಪಾಂಡೆ ಐಐಟಿ ರೂರ್ಕಿಯಲ್ಲಿ ಎಂಬಿಎ ಮಾಡಿದರು. ಎರಡು ವರ್ಷಗಳ ಕಾಲ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡಿದ ನಂತರ, ಅವರು 2020 ರಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಲು ಕೆಲಸವನ್ನು ತೊರೆದರು.
ಐಐಟಿ ರೂರ್ಕಿಯಲ್ಲಿ ಅಧಿಕಾರಿಯೊಂದಿಗೆ ಮಾತನಾಡಿದ ನಂತರ, ಅವರು ನಾಗರಿಕ ಸೇವೆಗಳಿಗೆ ಸೇರಲು ಯೋಜಿಸಿದರು. UPSC ಪರೀಕ್ಷೆಯ ಎರಡು ಪ್ರಯತ್ನಗಳಲ್ಲಿ ಅವರು ವಿಫಲರಾಗಿದ್ದರು. ಆದರೆ ಅವರು ಸೋಲನ್ನು ಒಪ್ಪಿಕೊಳ್ಳಲಿಲ್ಲ. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ, ಆದಿತ್ಯ ಪಾಂಡೆ 2022 ರಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಿದ್ದರು. ಅವರು UPSC CSE 2022 ರಲ್ಲಿ ಅಖಿಲ ಭಾರತ 48 ನೇ ಸ್ಥಾನವನ್ನು ಪಡೆಯುವ ಮೂಲಕ IAS ಅಧಿಕಾರಿಯಾದರು. ಅವರಿಗೆ ಜಾರ್ಖಂಡ್ ಕೇಡರ್ ನೀಡಲಾಗಿತ್ತು.
ಆದಿತ್ಯ ಪ್ರಸ್ತುತ ಅವರು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಸಹಾಯಕ ಕಲೆಕ್ಟರ್ ಹುದ್ದೆಯಲ್ಲಿದ್ದಾರೆ.