ಮಂಗಳೂರು, ಮೇ 21 (Daijiworld News/SM): ಸದ್ಯದಲ್ಲೇ ರವಿ ಪೂಜಾರಿ ಭಾರತಕ್ಕೆ ಹಸ್ತಾಂತರಗೊಳ್ಳಲಿದ್ದಾನೆ. ರವಿ ಪೂಜಾರಿ ಹಸ್ತಾಂತರದಿಂದ ಆತನೊಂದಿಗೆ ನಂಟು ಹೊಂದಿರುವ ಕೆಲ ರಾಜಕಾರಣಿಗಳು, ಪೊಲೀಸರು, ಉದ್ಯಮಿಗಳಲ್ಲಿ ನಡುಕ ಶುರುವಾಗಿದೆ.
ಸೆನೆಗಲ್ ನ ಪೊಲೀಸರಿಂದ ಕೆಲ ತಿಂಗಳ ಹಿಂದೆ ರವಿ ಪೂಜಾರಿ ಬಂಧಿತನಾಗಿದ್ದ. ಇದೀಗ ಭಾರತದಲ್ಲಿರುವ ಕೆಲ ಪ್ರಕರಣಗಳಿಗಾಗಿ ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ರವಿ ಪೂಜಾರಿಯನ್ನ ಭಾರತಕ್ಕೆ ತಂದು ವಿಚಾರಣೆ ನಡೆಸಲು ಪೊಲೀಸ್ ಇಲಾಖೆ ಕೂಡ ತಯಾರಾಗಿದೆ.
ಸದ್ಯದಲ್ಲೇ ಮುಂಬಯಿ ಪೊಲೀಸರು ರವಿ ಪೂಜಾರಿಯನ್ನು ಭಾರತಕ್ಕೆ ಕರೆ ತರಲಿದ್ದಾರೆ. ಮಂಗಳೂರಿನಲ್ಲೂ ಕೆಲವು ಪ್ರಕರಣಗಳು ರವಿ ಪೂಜಾರಿ ಮೇಲಿದೆ. ಈ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಲು ತಯಾರಿ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆದ ಬಳಿಕ ವಿಚಾರಣೆ ಕಾರ್ಯ ನಡೆಯದಿದೆ ಎಂದು ಹೇಳಲಾಗುತ್ತಿದೆ.