ಬೆಂಗಳೂರು,ಆ.08(DaijiworldNews/AK): 136 ಶಾಸಕರ ಬೆಂಬಲ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಳಿಸಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಅದು ಸಾಧ್ಯವಿಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಖಡಕ್ ಆಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಒಂದು ಕ್ಷುಲ್ಲಕ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ತೆಗಿಬೇಕು ಅಂತಾ ಪಾದಯಾತ್ರೆ ಮಾಡ್ತಿದ್ದಾರೆ. ಪಾದಯಾತ್ರೆ ದೇಶದಲ್ಲಿ ಅಭಿವೃದ್ಧಿ ಕೆಲಸಕ್ಕೆ ಮಾಡಲಿ. ಕೇಂದ್ರದಲ್ಲಿ ಇವರನ್ನ ಸಚಿವರನ್ನಾಗಿ ಮಾಡಿದ್ದಾರೆ. ನಮ್ಮ ಕಡೆಯಿಂದ ನಾಲ್ಕು ಜನ ಸಚಿವರಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆ ಇವರು ಚಿಂತನೆ ಮಾಡಬೇಕು ಎಂದು ರಾಜ್ಯದ ಕೇಂದ್ರ ಸಚಿವರಿಗೆ ತಿರುಗೇಟು ನೀಡಿದರು.
136 ಸೀಟ್ ಗೆದ್ದು ಜನಾದೇಶ ಪಡೆದಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ತೆಗಿಬೇಕು ಅಂತಾ ಚಿಂತನೆ ಮಾಡಿದ್ದಾರೆ. ಇದರ ವಿರುದ್ದವಾಗಿ ನಾಳೆ ಜನಾಂದೋಲನ ಕಾರ್ಯಕ್ರಮವನ್ನ ಬೃಹತ್ ಮಟ್ಟದಲ್ಲಿ ಮಾಡ್ತೀವಿ ಎಂದು ತಿಳಿಸಿದರು.