ನವದೆಹಲಿ, ಆ 09(DaijiworldNews/AK): 2023 ರ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅನ್ನಪೂರ್ಣ ಸಿಂಗ್ 99 ನೇ ರ್ಯಾಂಕ್ ಗಳಿಸಿದ್ದಾರೆ. ಆಕೆ ಬಂಕಾ ಜಿಲ್ಲೆಯ ಲಾಹೋರಿಯಾ ಗ್ರಾಮದ ನಿವಾಸಿ. ಅವರ ತಂದೆ ರೈತ. ಅನ್ನಪೂರ್ಣ ಇಂಟೆಲ್ ನಲ್ಲಿ ಸೆಮಿ ಕಂಡಕ್ಟರ್ ಎಂಜಿನಿಯರ್ ಆಗಿ ಕೆಲಸ ಮಾಡಿದರು. ಖಾಸಗಿ ಕಂಪನಿಯೊಂದರಲ್ಲಿ ಬಿಡುವಿಲ್ಲದ ಕೆಲಸದ ಜೊತೆಗೆ ಪರೀಕ್ಷಾ ತಯಾರಿ ನಡೆಸಿದ್ದಾರೆ.
ಅನ್ನಪೂರ್ಣ ಸಿಂಗ್ ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿದ್ದಾರೆ. ಇದಾದ ನಂತರ ಬಹುರಾಷ್ಟ್ರೀಯ ಕಂಪನಿ ಇಂಟೆಲ್ ನಲ್ಲಿ ಸೆಮಿಕಂಡಕ್ಟರ್ ಇಂಜಿನಿಯರ್ ಆಗಿ ಕೆಲಸ ಸಿಕ್ಕಿತು. ಅಷ್ಟರಲ್ಲಿ ಕೋವಿಡ್ ಮಹಾಮಾರಿ ಬಂದಿತು. ಈ ಸಮಯದಲ್ಲಿ ಅವರು UPSC ನಾಗರಿಕ ಸೇವೆ ಪರೀಕ್ಷೆ ಬರೆಯುವ ಬಗ್ಗೆ ಯೋಚಿಸಿದರು.
ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲಳಾದರು. ಅಂತಿಮವಾಗಿ ಅವರು ಮೂರನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದರು. UPSC ಯ ಮೊದಲ ಪ್ರಯತ್ನದ ನಂತರ, ಲಕ್ಷಗಳ ಸಂಬಳದ ಕೆಲಸವನ್ನು ಅನ್ನಪೂರ್ಣ ತೊರೆದರು ತನ್ನ ಮುಂದಿನ ಪ್ರಯತ್ನಗಳಿಗೆ ತಯಾರಿ ನಡೆಸಲು ಪಾಟ್ನಾಗೆ ಹೋದರು.
ಸಂದರ್ಶನದಲ್ಲಿ ಪಡೆದ ಅಂಕಗಳು ಅನ್ನಪೂರ್ಣ ಸಿಂಗ್ ಯುಪಿಎಸ್ಸಿಯಲ್ಲಿ ಅಗ್ರ 100 ರ ರ್ಯಾಂಕ್ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಂದರ್ಶನದಲ್ಲಿ ಅವರು 212 ಅಂಕಗಳನ್ನು ಪಡೆದಿದ್ದರು. UPSC ಸಂದರ್ಶನದಲ್ಲಿ ಎರಡನೇ ಟಾಪರ್ ಆಗಿದ್ದರು. ಸಾಮಾನ್ಯ ಕುಟುಂಬದಲ್ಲಿ ಬೆಳೆದ ಅನ್ನಪೂರ್ಣ ವಿದ್ಯಾಭ್ಯಾಸ ಮುಗಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡತೊಡಗಿದಳು. ಆದರೆ ನಾಗರಿಕ ಸೇವೆಗೆ ಸೇರುವುದು ಅವರ ಕನಸಾಗಿತ್ತು. ಹಾಗಾಗಿ ಅವರು ತಮ್ಮ ಕೆಲಸದ ಜೊತೆಗೆ UPSC ಗೆ ತಮ್ಮ ತಯಾರಿಯನ್ನು ಮುಂದುವರೆಸಿದರು, ಅಂತಿಮವಾಗಿ ಯಶಸ್ಸನ್ನು ಪಡೆದರು.