ನವದೆಹಲಿ, ಆ 10(DaijiworldNews/MS): ಅಮೇರಿಕಾ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ " ಹಿಂಡೆನ್ ಬರ್ಗ್ ರಿಸರ್ಚ್ " ಹಾಕಿರುವ ಎಕ್ಸ್ ಪೋಸ್ಟ್ ಭಾರತದ ಸಂಚಲನ ಸೃಷ್ಟಿಸಿದೆ. ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಅಕ್ರಮ ಎಸಗಿದೆ 2023ರ ಜನವರಿಯಲ್ಲಿ ಹಿಂಡನ್ ಬರ್ಗ್ ವರದಿ ಪ್ರಕಟಿಸಿದ ದೇಶಾದ್ಯಂತ ತಲ್ಲಣ ಮೂಡಿಸಿತ್ತು.
ಹಿಂಡನ್ಬರ್ಗ್ ಶನಿವಾರದಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ʼʼಶೀಘ್ರದಲ್ಲೇ ಭಾರತದಲ್ಲಿ ಬಹುದೊಡ್ಡದು ನಡೆಯಲಿದೆʼʼ (Something big soon India) ಎಂದು ಬರೆದುಕೊಂಡಿದೆ. ಹೀಗಾಗಿ ಈ ಬಾರಿ ಹಿಂಡೆನ್ ಬರ್ಗ್ ಯಾರನ್ನು ಟಾರ್ಗೆಟ್ ಮಾಡಲಿದೆ ಎನ್ನುವುದು ದೊಡ್ಡ ಕುತೂಹಲವಾಗಿದೆ.
ಜನವರಿ 2023 ರಲ್ಲಿ, ಹಿಂಡನ್ಬರ್ಗ್ ಅದಾನಿ ಗ್ರೂಪ್ನ ಹಣಕಾಸು ಅಕ್ರಮಗಳ ಆರೋಪದ ವರದಿಯನ್ನು ಪ್ರಕಟಿಸಿತು. ಇದು ಕಂಪನಿಯ ಷೇರು ಬೆಲೆಯಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಯಿತು. ಅದಾನಿ ಗ್ರೂಪ್ ಹಿಂಡನ್ಬರ್ಗ್ ವರದಿಯನ್ನು ತಳ್ಳಿಹಾಕಿತ್ತು. ಹಿಂಡನ್ಬರ್ಗ್ ವರದಿಯು ಅದಾನಿ ಸಮೂಹದಿಂದ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ವಂಚನೆಯನ್ನು ಆರೋಪಿಸಿತ್ತು.