ಬೆಂಗಳೂರು,ಮೇ.22(DaijiworldNews/AZM):ತಮ್ಮ ಮಗನ ಶಾಲೆಯ ಫೀಸ್ ಕಟ್ಟಲೆಂದು ಬ್ಯಾಂಕ್ ನಿಂದ ಡ್ರಾ ಮಾಡಿ ಸ್ಕೂಟಿಯ ಡಿಕ್ಕಿಯಲ್ಲಿಟ್ಟಿದ್ದ ಸುಮಾರು 48 ಸಾವಿರ ಹಣವನ್ನು ಖತರ್ನಾಕ್ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ತಮ್ಮ ಮಗನ ಎಡ್ಮಿಷನ್ ಫೀಸ್ ಕಟ್ಟಲೆಂದು ಆ ದಂಪತಿಗಳು ಬ್ಯಾಂಕ್ ನಿಂದ 48 ಸಾವಿರ ರೂ ಡ್ರಾ ಮಾಡಿ ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟಿದ್ದರು. ದಾರಿ ಮಧ್ಯೆ ಸ್ಕೂಟಿ ನಿಲ್ಲಿಸಿ ದಂಪತಿಗಳು ತಮ್ಮ ಮಗನೊಂದಿಗೆ ಊಟ ಮಾಡಲು ಹೋಟೆಲ್ ತೆರಳಿದ್ದಾರೆ. ಈ ವೇಳೆ ಆಕ್ಟೀವಾ ಸ್ಕೂಟಿಯ ಡಿಕ್ಕಿಯಲ್ಲಿ ಡ್ರಾ ಮಾಡಿ ಇಟ್ಟ ಹಣವನ್ನು ಕಳ್ಳರು ಕದ್ದು ಎಸ್ಕೇಪ್ ಆಗಿದ್ದಾರೆ.ಊಟ ಮಾಡಿ ಬಂದ ನಂತರ ಡಿಕ್ಕಿಯಲ್ಲಿಟ್ಟಿದ್ದ ಹಣ ಕಾಣದಿದ್ದಾಗ ದಂಪತಿ ಕಂಗಾಲಾಗಿದ್ದಾರೆ. ಅಲ್ಲದೆ ಕಳ್ಳರ ಕೃತ್ಯದಿಂದ ಮಗನ ಅಡ್ಮಿಶನ್ ಫೀಸ್ ಕಟ್ಟಲಾಗದೇ ದಂಪತಿ ಕಣ್ಣಿರಿಡುತ್ತಿದ್ದಾರೆ.ಶ್ರೀನಾಥ್ ಅವರು ಹಣ ಡ್ರಾ ಮಾಡಿಕೊಂಡು ಬರಿವಾಗ ಆವಲಹಳ್ಳಿಯ ಬ್ಯಾಂಕಿನಿಂದಲೂ ಕಳ್ಳರು ಅವರನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ಸುಮಾರು 2 ಕಿಲೋಮೀಟರ್ ಫಾಲೋ ಮಾಡಿ, ಅವರು ಊಟಕ್ಕೆ ತೆರಳಿದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಸ್ಕೂಟಿ ಡಿಕ್ಕಿಯಿಂದ ಹಣವನ್ನು ಕಳ್ಳರು ಕದಿಯುತ್ತಿರುವ ಸಂಪೂರ್ಣ ದೃಶ್ಯಾವಳಿಗಳು ಹೋಟೆಲ್ ಪಾರ್ಕಿಂಗ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಗಳವಾರ ಮಧ್ಯಾಹ್ನ ಭಟ್ಟರಹಳ್ಳಿಯ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಬೆಂಗಳೂರು ನಿವಾಸಿಯಾಗಿರುವ ಶ್ರೀನಾಥ್ ಅವರ ಆವಲಹಳ್ಳಿಯ ಬ್ಯಾಂಕ್ ಆಫ್ ಇಂಡಿಯಾದಲ್ಲಿ 48 ಸಾವಿರ ಹಣ ಡ್ರಾ ಮಾಡಿದ್ದರು.
ಈ ಸಂಬಂದ ದಂಪತಿ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.