ನವದೆಹಲಿ, ಆ.12 (DaijiworldNews/AK):ಐಎಎಸ್ ರಿಷಿ ಗರ್ಗ್ ಯಶಸ್ಸಿನ ಕಥೆ ಇಲ್ಲಿದೆ.2013ರ ಬ್ಯಾಚ್ ನ ಐಎಎಸ್ ಅಧಿಕಾರಿ ರಿಷಿ ಗರ್ಗ್ ಪ್ರಸ್ತುತ ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಡಿಎಂ ಆಗಿ ನೇಮಕಗೊಂಡಿದ್ದಾರೆ. ಅವರು ಯುಪಿಯ ಆಗ್ರಾದಲ್ಲಿ ಜನಿಸಿದರು. ಅವರ ತಂದೆ ಪಿಡಬ್ಲೂಡಿ ಯಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿದ್ದರು, ಪ್ರಸ್ತುತ ಅವರು ನಿವೃತ್ತರಾಗಿದ್ದಾರೆ.
ರಿಷಿ ಯಾವಾಗಲೂ ಅಧ್ಯಯನದಲ್ಲಿ ಮುಂದಿದ್ದರು. ಲಕ್ನೋದ ಸಿಟಿ ಮಾಂಟೆಸ್ಸರಿ ಶಾಲೆಯಲ್ಲಿ ಓದಿದ್ದಾರೆ. ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗಾಗಿ ಶಾಲೆಯಿಂದ ಅವರನ್ನು ಗೌರವಿಸಲಾಯಿತು. ಅವರ ತಂದೆ IIT BHU ನಲ್ಲಿ ಓದಿದ್ದಾರೆ, ಆದ್ದರಿಂದ ಅವರು ಎಂಜಿನಿಯರಿಂಗ್ ನಲ್ಲಿ ಆಸಕ್ತಿ ಹೊಂದಿದ್ದರು.
2004ರಲ್ಲಿ ಐಐಟಿ ಜೆಇಇ ಪರೀಕ್ಷೆಯಲ್ಲಿ 249ನೇ ರ್ಯಾಂಕ್ ಪಡೆದು ಐಐಟಿ ಕಾನ್ಪುರದಲ್ಲಿ ಪ್ರವೇಶ ಪಡೆದರು. ಇಲ್ಲಿಂದಲೇ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದರು. ಪದವಿಯ ನಂತರ ಅವರು ಮುಂಬೈನ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಲ್ಲಿ ಅವರು ಅಂತರರಾಷ್ಟ್ರೀಯ ಕಂಪನಿಗಳಿಗೆ ಪೇಟೆಂಟ್ ಗಳನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದರು. ಆಗ ಅವರ ಪ್ಯಾಕೇಜ್ ವರ್ಷಕ್ಕೆ 8 ಲಕ್ಷ ರೂ ರಿಷಿ ತನ್ನ ಸ್ನೇಹಿತರೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದರು. 2 ವರ್ಷಗಳ ಕೆಲಸದ ನಂತರ, ಅವರ ಸ್ನೇಹಿತರೊಬ್ಬರು ದೆಹಲಿಗೆ ಹೋಗಿ UPSC ಗೆ ತಯಾರಿ ಮಾಡಲು ನಿರ್ಧರಿಸಿದರು. ಆಗ ರಿಷಿಗೆ ಸಿವಿಲ್ ಸರ್ವೀಸಸ್ ಪರೀಕ್ಷೆಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಅವರು ಪರೀಕ್ಷೆಯ ಬಗ್ಗೆ ಸಂಶೋಧನೆ ನಡೆಸಿದರು, ನಂತರ ಸ್ವತಃ UPSC ಗೆ ತಯಾರಿ ಮಾಡಲು ನಿರ್ಧರಿಸಿದರು.
ಒಳ್ಳೆಯ ಕೆಲಸ ಬಿಟ್ಟು ಪರೀಕ್ಷೆಗೆ ತಯಾರಾಗಬೇಕು ಎಂಬ ನಿರ್ಧಾರ ಅಷ್ಟು ಸುಲಭವಾಗಿರಲಿಲ್ಲ, ಆದರೆ ಮನೆಯವರ ಬೆಂಬಲ ಹಾಗೂ ಸ್ನೇಹಿತರ ಪ್ರೋತ್ಸಾಹದಿಂದ ಮುಂದೆ ಸಾಗಲು ಸಾಧ್ಯವಾಯಿತು. ರಿಷಿ ಅವರ ಅವಿರತ ಪರಿಶ್ರಮದ ಫಲವಾಗಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾದರು. ಅವರು 2012 ರಲ್ಲಿ UPSC ಯಲ್ಲಿ 398 ನೇ ರ್ಯಾಂಕ್ ಗಳಿಸಿದರು ಮತ್ತು IRS ಆದರು. ಆದರೆ, ತನ್ನ ರ್ಯಾಂಕ್ನಿಂದ ತೃಪ್ತನಾಗದೆ ಮತ್ತೆ ಪರೀಕ್ಷೆ ಬರೆದಿದ್ದಾರೆ. UPSC 2013 ರಲ್ಲಿ 49 ನೇ ರ್ಯಾಂಕ್ ಗಳಿಸುವ ಮೂಲಕ IAS ಅಧಿಕಾರಿಯಾದರು.
IAS ಆದ ನಂತರ, ಅವರು ಮಧ್ಯಪ್ರದೇಶ ಕೇಡರ್ ಪಡೆದರು ಮತ್ತು ಅವರ ಮೊದಲ ಪೋಸ್ಟಿಂಗ್ ನರಸಿಂಗ್ಗಢ ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿಯಾಗಿ. ಇದರ ನಂತರ ಅವರು ಶಿಯೋಪುರ್, ಛಿಂದ್ವಾರಾ ಮತ್ತು ಉಜ್ಜಯಿನಿ ಜಿಲ್ಲೆಗಳಲ್ಲಿಯೂ ಸೇವೆ ಸಲ್ಲಿಸಿದರು. ಪ್ರಸ್ತುತ ಅವರನ್ನು ಜಿಲ್ಲಾಧಿಕಾರಿ ಹರ್ದಾ ಆಗಿ ನಿಯೋಜಿಸಲಾಗಿದೆ.