ಶಿವಮೊಗ್ಗ, ಆ. 12 (DaijiworldNews/AK): ಬಿಜೆಪಿಯ 12 ಜನ ಬೆಳಗಾವಿಯಲ್ಲಿ ಸಭೆ ನಡೆಸಿದ್ದು ನನಗೆ ಆಘಾತವಾಗಿದೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, 12 ಜನ ಮಾತ್ರ ಸಭೆ ನಡೆಸಿದ್ದಾರೆಂದು ಕೇಂದ್ರದ ನಾಯಕರು ತಾತ್ಸಾರ ಮಾಡಬಾರದು. ಬೆಳಗಾವಿಯ ನಂತರ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಅವರು ಪಾದಯಾತ್ರೆ ನಡೆಸಿದರೆ ಗಲ್ಲಿ ಗಲ್ಲಿಗಳಲ್ಲಿ ಪಕ್ಷ ಎರಡಾಗುತ್ತದೆ. ಪ್ರತಿ ತಾಲೂಕಿನಲ್ಲಿ ಬಿಜೆಪಿ ಇಬ್ಭಾಗವಾಗುತ್ತದೆ ಎಂದರು.
ಪಕ್ಷದ ವಿಚಾರದಡಿ ಕೆಲಸ ಮಾಡಿದ್ದರೂ ಬಹಳ ಜನಕ್ಕೆ ನೋವಿದೆ. ಲೋಕಸಭೆ ಚುನಾವಣೆಯ ವೇಳೆಗೆ ವಿಜಯೇಂದ್ರರನ್ನು ಅಧ್ಯಕ್ಷರಾನ್ನಾಗಿ ಮಾಡಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು. ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಅಧಿಕಾರ ನೀಡಿದಕ್ಕೆ ಲೋಕಸಭೆಯಲ್ಲಿ 25 ರಿಂದ 17ಸ್ಥಾನಕ್ಕೆ ಇಳಿದೆವು . ಮೋದಿ ಇದ್ದು, ಪಕ್ಷ ಬಲ ಇದ್ದಾಗ ಹೆಚ್ಚು ಸ್ಥಾನಗಳಲ್ಲಿ ಗೆಲುವು ಕಂಡಿದ್ದೆವು. ಈಗ ಜೆಡಿಎಸ್ ಹೊಂದಾಣಿಕೆ ಮಾಡದೆ ಹೋಗದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದರು.