ಕೋಲ್ಕತ್ತಾ, ಆ 12 (DaijiworldNews/TA) : ಕೋಲ್ಕತ್ತಾದ ಆರ್ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ಕಳೆದ ವಾರ ನಡೆದ 31 ವರ್ಷದ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಭಾನುವಾರದವರೆಗೆ ಸಮಯವಿದ್ದು, ವಿಫಲವಾದರೆ ಪ್ರಕರಣವನ್ನು ಸಿಬಿಐ ವಹಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್, ಈ ಅಪರಾಧವನ್ನು ಪರಿಹರಿಸಲು ಪೊಲೀಸರು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿವರಿಸಿದರು. "ನಮಗೆ ಖಚಿತವಾಗಿದೆ... ಮುಂದಿನ ನಾಲ್ಕೈದು ದಿನಗಳಲ್ಲಿ, ಇನ್ನೂ ಹೆಚ್ಚಿನ ಅಪರಾಧಿಗಳಿದ್ದರೆ, ನಾವು ಅವರನ್ನು ಬಂಧಿಸಲು ಸಾಧ್ಯವಾಗುತ್ತದೆ," "ನಾವು ಸಹಾಯವಾಣಿಯನ್ನು ಪ್ರಾರಂಭಿಸಿದ್ದೇವೆ, ವೈದ್ಯರು ಕರೆ ಮಾಡುವ ಮೂಲಕ ಮಾಹಿತಿ ನೀಡಬಹುದು ಮತ್ತು ಅನಾಮಧೇಯವಾಗಿ ಸಂವಹನ ಮಾಡಬಹುದು ಎಂದರು.
"ನಾವು ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ. ಅದರ ನಂತರವೂ ಕುಟುಂಬವು ತೃಪ್ತರಾಗದಿದ್ದರೆ ಸಿಎಂ ಮಮತಾ ಬ್ಯಾನರ್ಜಿ ಏನು ಹೇಳುತ್ತಾರೋ ಅದು ಸಂಭವಿಸುತ್ತದೆ" ಎಂದು ಅವರು ಹೇಳಿದರು.