ನವದೆಹಲಿ, ಆ 13 (DaijiworldNews/TA) : ದೇಶದೆಲ್ಲೆಡೆ ಸ್ವಾತಂತ್ರ್ಯ ಹಬ್ಬಕ್ಕೆ ತಯಾರಿ ಶುರುವಾಗಿದೆ. ಸ್ವಾತಂತ್ಯ್ರೋತ್ಸ ಆಚರಣೆ ಅಂಗವಾಗಿರುವ ಹರ್ ಘರ್ ತಿರಂಗ ಅಭಿಯಾನ ಯಾತ್ರೆಗೆ ಇಂದು ಅಹಮದಾಬಾದ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ.
ಆಗಸ್ಟ್ 11ರಿಂದ ಆರಂಭವಾಗಿರುವ ಈ ಅಭಿಯಾನದ ಭಾಗವಾಗಿ ಬಿಜೆಪಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಿರಂಗ ಯಾತ್ರೆ ನಡೆಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಯುದ್ಧ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸುವ ಗೌರವ ಸೂಚಿಸುವ ಸಲುವಾಗಿ ಈ ಯೋಜನೆ ಚಾಲನೆಗೆ ಬಂದಿದೆ.
ಅಹಮದಾಬಾದ್ನ ವಿರಾಟ್ನಗರ ಪ್ರದೇಶದಲ್ಲಿ ಇಂದು ಸಂಜೆ 4.30ರಿಂದ ಈ ಯಾತ್ರೆ ಪ್ರಾರಂಭವಾಗಲಿದೆ. ಆಗಸ್ಟ್ 14ರಂದು ವಿಭಜನೆಯ ಸ್ಮರಣಾರ್ಥ ದಿನವನ್ನು ಎಲ್ಲಾ ಜಿಲ್ಲೆಗಳಲ್ಲಿ ಮೌನ ಮೆರವಣಿಗೆಯೊಂದಿಗೆ ಆಚರಿಸಲಾಗುವುದು ಎಂದು ಹೇಳಲಾಗಿದೆ.