ಕಲಬುರಗಿ, ಆ.13(DaijiworldNews/AA): ಬಿಜೆಪಿಯವರು ಡ್ಯಾಂ ವಿಚಾರದಲ್ಲಿ ರಾಜಕೀಯ ಬೆರಸಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಣೆಕಟ್ಟು ಬಹಳ ಹಳೆಯದಾಗಿ ಕ್ರಸ್ಟ್ ಗೇಟ್ ಕಳಚಿರಬಹುದು, ಬಿಜೆಪಿಯವರು ತಮ್ಮ ಆಡಳಿತ ಅವಧಿಯಲ್ಲಿ ಎಷ್ಟು ಡ್ಯಾಂಗಳ ಸ್ಟ್ರೆಂತ್ ಪರಿಶೀಲಿಸಿದ್ದಾರೆ, ಅದರ ದಾಖಲೆ ಕೊಡಲಿ ಎಂದರು. ಅವರ ವರದಿಯನ್ನು ನಾವು ನಿರ್ಲಕ್ಷ್ಯ ಮಾಡಿದ್ದರೆ ಆರೋಪ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯದ ಎಲ್ಲಾ ಡ್ಯಾಂಗಳ ಸ್ಟ್ರೆಂತ್ ಬಗ್ಗೆ ಪರೀಶಿಲನೆ ಮಾಡುತ್ತೇವೆ. ಮುಡಾ ಕೇಸ್ ನಲ್ಲಿ ಸ್ಪಷ್ಟವಾಗಿ ರಾಜಕೀಯ ದುರುದ್ದೇಶವಿದೆ. ರಾಜ್ಯಪಾಲರ ಕಚೇರಿಯನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಸೇರಿ ರಾಜ್ಯಪಾಲರ ಕಚೇರಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಎಂದರು.
ಮುಡಾ ಕೇಸ್ ಪಿಸಿ ಆಕ್ಟ್ನಲ್ಲಿಯೇ ಬರುವುದಿಲ್ಲ, ಆದರೂ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ರಾಜ್ಯಪಾಲರು ಅವರ ಕೈಗೊಂಬೆಯಾಗಿದ್ದಾರೆ ಎಂದು ಇದರಿಂದ ಸ್ಪಷ್ಟವಾಗಿದೆ. ರಾಜ್ಯದಲ್ಲಿ ಬಿಜೆಪಿ V/s ಬಿಜೆಪಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅಶೋಕ ನಾಯಕತ್ವ ಒಪ್ಪುತ್ತಿಲ್ಲ ಎಂದರು.
ಪಿಎಸ್ಐ ಪರಶುರಾಮ ಸಾವಿನ ಬಗ್ಗೆ ನಿಷ್ಪಕ್ಷಪಾತ ತನೀಖೆ ಮಾಡುತ್ತಿದ್ದೆವೆ ಎಂದು ಹೇಳಿದರು.