ನವದೆಹಲಿ, ಆ.14(DaijiworldNews/AK):ಭಾರೀ ಮಳೆಯಾಗುತ್ತಿರುವ ಹಿನ್ನಲೆ ಕೇರಳದ ವಯನಾಡ್ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇಂದು ಕಣ್ಣೂರು, ಎರ್ನಾ ಕುಲಂ , ತ್ರಿಶೂರ್, ನಾಳೆ(ಗುರುವಾರ) ಕೋಯಿಕ್ಕೋ ಡ್ ಮತ್ತು ವಯನಾಡಿನ ಒಂದು ಅಥವಾ ಎರಡು ಪ್ರದೇಶದಲ್ಲಿ ಹೆಚ್ಚು ಮಳೆಯಿಂದ (24 ಗಂಟೆಯಲ್ಲಿ 7 ಸೆಂ .ಮೀ ನಿಂ ದ 11 ಸೆಂ .ಮೀ ) ಅತಿ ಹೆಚ್ಚು( 24 ಗಂ ಟೆಯಲ್ಲಿ 12 ಸೆಂ .ಮೀ ನಿಂ ದ 20 ಸೆಂ .ಮೀ ) ಮಳೆಯಾಗುವ ಸಂಭವಿದೆ ಎಂದು ಐಎಂಡಿ ತಿಳಿಸಿದೆ.
ಲಕ್ಷದ್ವೀಪಕ್ಕೂ ರೆಡ್ ಅಲರ್ಟ್ ಘೋ ಷಿಸಿರುವ ಐಎಂ ಡಿ, ಇಂ ದು ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ.ವಯನಾಡಿನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತಕ್ಕೆ ಹವಾಮಾನ ಬದಲಾವಣೆಯಿಂ ದ ಸುರಿದ ಶೇ 10ಕ್ಕಿಂ ತ ಅಧಿಕ ಮಳೆಯೇ ಕಾರಣ ಎಂದು ಜಾಗತಿಕ ವಿಜ್ಞಾನಿಗಳ ತಂಡ ತಿಳಿಸಿದೆ. ತಾಪಮಾನ ಏರಿಕೆಯಿಂ ದ ಇಂ ತಹ ಮತ್ತಷ್ಟು ಅಪಾಯಗಳು ಸಂ ಭವಿಸಲಿದೆ ಎಂ ದು ಅವರು ಎಚ್ಚರಿಸಿದ್ದಾರೆ.