ಕಾರವಾರ, ಆ.15 (DaijiworldNews/TA): ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೊಡಿಬಾಗ್ ಬ್ರಿಡ್ಜ್ ಬಳಿ ಕಾಳಿ ನದಿಗೆ ಲಾರಿಯೊಂದು ಬಿದ್ದಿತ್ತು. ಸತತ ಪ್ರಯತ್ನದ ನಂತರ ಇದೀಗ ಲಾರಿ ಮೇಲಕ್ಕೆತ್ತಲಾಗಿದೆ.
ಕಳೆದ ಆಗಸ್ಟ್ 6 ರ ಮಧ್ಯರಾತ್ರಿ ಸೇತುವೆ ಕುಸಿದಿತ್ತು, ಈ ವೇಳೆ ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ಸತತ ೯ ಗಂಟೆ ಕಾರ್ಯಚರಣೆ ಮೂಲಕ ರಕ್ಷಣಾ ಸಿಬ್ಬಂದಿಗಳು ಇಂದು ಮೇಲಕ್ಕೆತ್ತಿದ್ದಾರೆ. ಮಳೆ ಪ್ರಮಾಣ ತಗ್ಗಿದ ಹಿನ್ನೆಲೆ ಇಂದು ಬೆಳಿಗ್ಗೆ 9 ಗಂಟೆಯಿಂದ ಐಆರ್ಬಿ ಹಾಗೂ ಜಿಲ್ಲಾಡಳಿತದಿಂದ ಜಂಟಿ ಕಾರ್ಯಾಚರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಸ್ಥಳದಲ್ಲಿ ಪೊಲೀಸರು, ಅಧಿಕಾರಿಗಳು ಬೀಡು ಬಿಟ್ಟಿದ್ದರು. ತಮಿಳುನಾಡು ಮೂಲದ ಸೆಂಥಿಲ್ ಒಡೆತನದ ಲಾರಿಯನ್ನು 2 ಕ್ರೇನ್, 3 ಟೋಯಿಂಗ್ ವೆಹಿಕಲ್, ಈಶ್ವರ ಮಲ್ಪೆ ತಂಡದಿಂದ ಹೊರತೆಗೆಯಲಾಗಿದೆ. 100ಕ್ಕೂ ಹೆಚ್ಚು ಜನರ ಪ್ರಯತ್ನ ಸಫಲವಾಗಿದೆ.