ಮುಂಬೈ, ಮೇ 18 (Daijiworld News/SM): ಮೇ 30ರಿಂದ ಇಂಗ್ಲೆಂಡ್ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ಗಾಗಿ ಈಗಾಗಲೇ ಟೀಂ ಇಂಡಿಯಾ ಫೈನಲ್ ಆಗಿದೆ. ಆದರೆ ಅಚ್ಚರಿ ಬೆಳವಣಿಗೆ ಎಂಬಂತೆ ತಂಡದಲ್ಲಿ ಓರ್ವ ಆಟಗಾರನನ್ನು ಬದಲಾವಣೆ ಮಾಡಲಾಗಿದೆ.
ಉದಯೋನ್ಮುಖ ಆಟಗಾರ ರಿಷಭ್ ಪಂತ್ ಸ್ಥಾನಕ್ಕೆ ಅನುಭವಿ ದಿನೇಶ್ ಕಾರ್ತಿಕ್ ಆಯ್ಕೆಗೊಂಡಿದ್ದಾರೆ. ಈ ವಿಷಯವನ್ನು ಸ್ವತಃ ನಾಯಕ ಕೊಹ್ಲಿ ಬಾಯ್ಬಿಟ್ಟಿದ್ದಾರೆ. ಎಂಎಸ್ ಧೋನಿಗೆ ಎರಡನೇ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಆಯ್ಕೆಯಾಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಮಾತನಾಡಿ, ಅನುಭವದ ಆಧಾರದ ಮೇಲೆ ಅವರಿಗೆ ಚಾನ್ಸ್ ನೀಡಲಾಗಿದೆ ಎಂದಿದ್ದರು. ಇದೀಗ ಕೊಹ್ಲಿ ಕೂಡ ಇದೇ ಮಾತನ್ನು ಹೇಳಿದ್ದಾರೆ.
ರಿಷಭ್ ಪಂತ್ಗೆ ಹೋಲಿಕೆ ಮಾಡಿದಾಗ ಕಾರ್ತಿಕ್ ಹೆಚ್ಚು ಅನುಭವ ಹೊಂದಿದ್ದಾರೆ. ಒತ್ತಡದ ಸಮಯದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುವ ಕಲೆ ಅವರಿಗೆ ತಿಳಿದಿದೆ ಎಂದಿದ್ದಾರೆ.