ಮುಂಬೈ, ಆ.18 (DaijiworldNews/AK) :ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮತ್ತೊಮ್ಮೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ನಂ.1 ಪಟ್ಟ ಗಿಟ್ಟಿಸಿಕೊಂಡಿದೆ.
ಕಳೆದ ಮಾರ್ಚ್ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿತ್ತು. ಆ ಬಳಿಕ ಯಾವುದೇ ಟೆಸ್ಟ್ ಸರಣಿ ಆಡದಿದ್ದರೂ ಭಾರತ ನಂ.1 ಪಟ್ಟಕ್ಕೇರಿದೆ.
2023-25ನೇ ಆವೃತ್ತಿಯ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಆವೃತ್ತಿಯಲ್ಲಿ ಭಾರತ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿ 74 ಅಂಕ ಗಳಿಸಿದೆ. ಆಸೀಸ್ ತಂಡ 12 ಪಂದ್ಯಗಳ ಪೈಕಿ 8 ರಲ್ಲಿ ಗೆಲುವು ಸಾಧಿಸಿ 90 ಅಂಕ ಗಳಿಸಿದ್ದರೂ 62.50 ಪಿಟಿಸಿ ಇರುವುದರಿಂದ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನುಳಿದಂತೆ ನ್ಯೂಜಿಲೆಂಡ್ (50 ಪಿಟಿಸಿ), ಶ್ರೀಲಂಕಾ (50 ಪಿಟಿಸಿ), ದಕ್ಷಿಣ ಆಫ್ರಿಕಾ (38.89 ಪಿಟಿಸಿ) ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳಲ್ಲಿವೆ.
WTC ಅಂಕಪಟ್ಟಿಯ ಟಾಪ್-5 ತಂಡಗಳಾದ ಭಾರತ 68.51 ಪಿಟಿಸಿ, ಆಸ್ಟ್ರೇಲಿಯಾ - 62.50 ಪಿಟಿಸಿ, ನ್ಯೂಜಿಲೆಂಡ್ – 50 ಪಿಟಿಸಿ, ಶ್ರೀಲಂಕಾ – 50 ಪಿಟಿಸಿ ,ದಕ್ಷಿಣ ಆಫ್ರಿಕಾ – 38.89 ಪಿಟಿಸಿ ಹೊಂದಿದೆ.