ಮುಂಬೈ, ಆ.20(DaijiworldNews/AA): ಬಾಲಿವುಡ್ನಲ್ಲಿ ಬಯೋಪಿಕ್ಗಳನ್ನು ಹೆಚ್ಚಾಗಿ ಮೂಡಿಬರುತ್ತಿವೆ. ರಾಜಕಾರಣಿ, ಕ್ರೀಡಾಪಟುಗಳು, ನಟ-ನಟಿಯರು, ರೌಡಿಗಳು, ಮಾಫಿಯಾ ದೊರೆಗಳು ಹೀಗೆ ಹಲವರ ಬಯೋಪಿಕ್ಗಳು ಮೂಡಿಬಂದಿದೆ. ಇದೀಗ ಕ್ರಿಕೇಟಿಗ ಯುವರಾಜ್ ಸಿಂಗ್ ಅವರ ಜೀವನದ ಬಗ್ಗೆ ಬಯೋಪಿಕ್ ಮೂಡಿಬರಲಿದೆ.
ಈಗಾಗಲೇ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್ ಅವರ ಜೀವನದ ಬಗ್ಗೆ ಬಯೋಪಿಕ್ ಮೂಡಿಬಂದಿದ್ದು, ಹಿಟ್ ಕೂಡ ಆಗಿವೆ. ಆದರೆ ಯುವರಾಜ್ ಸಿಂಗ್ ಅವರ ಬಗ್ಗೆ ಸಿನಿಮಾ ಆಗಬೇಕೆಂಬ ಬೇಡಿಕೆ ಇದ್ದೇ ಇತ್ತು. ಇದೀಗ ಯುವರಾಜ್ ಸಿಂಗ್ ಜೀವನದ ಬಗ್ಗೆ ಬಯೋಪಿಕ್ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಆಗಿದೆ.
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ನಿರ್ಮಾಣ ಮಾಡಿದ್ದ ಭೂಷಣ್ ಕುಮಾರ್, ಯುವರಾಜ್ ಸಿಂಗ್ ಕುರಿತಾದ ಬಯೋಪಿಕ್ ಅನ್ನು ನಿರ್ಮಾಣ ಮಾಡಲಿದ್ದಾರೆ. ಭೂಷಣ್ ಜೊತೆಗೆ ರವಿ ಭಗ್ ಚಂದಕ ಕೂಡ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ. ಯುವರಾಜ್ ಸಿಂಗ್ ಅವರು ಈ ಇಬ್ಬರು ನಿರ್ಮಾಪಕರೊಂದಿಗಿರುವ ಫೋಟೋ ಇದೀಗ ವೈರಲ್ ಆಗಿದ್ದು, ಬಯೋಪಿಕ್ ನಿರ್ಮಾಣ ಮಾಡುತ್ತಿರುವುದು ಅಧಿಕೃತವಾಗಿದೆ.