ದುಬೈ, ಆ.21(DaijiworldNews/AK):ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಗ್ರೆಗ್ ಬರ್ಕ್ಲೆ ಅವರ ಅಧಿಕಾರಾವಧಿ ನವೆಂಬರ್ 30ರಂದು ಕೊನೆಗೊಳ್ಳಲಿದೆ. ಆ ಸ್ಥಾನಕ್ಕೆ ಈಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಹೆಸರು ಕೇಳಿ ಬರುತ್ತಿದೆ.
ನೂತನ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನವಾಗಿದೆ. ಆ ಸ್ಥಾನಕ್ಕೆ ಕಣಕ್ಕೆ ಇಳಿಸಲು ಶಾ ಅವರು ಆಸಕ್ತಿ ಹೊಂದಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಐಸಿಸಿ ಅಧ್ಯಕ್ಷರು ತಲಾ ಎರಡು ವರ್ಷ ಗಳ ಮೂರು ಅವಧಿಗೆ ಆಯ್ಕೆಯಾಗಬಹುದು. ಆದರೆ, ನ್ಯೂಜಿಲೆಂಡ್ನ ಗ್ರೆಗ್ ಈಗಾಗಲೇ ನಾಲ್ಕು ವರ್ಷ ಗಳನ್ನು ಪೂರೈಸಿದ್ದಾರೆ.
2020ರ ನವೆಂಬರ್ನಲ್ಲಿ ಗ್ರೆಗ್ ಅವರು ಐಸಿಸಿ ಸಾರಥ್ಯ ಹೊಂದಿದರು. 2022ರಲ್ಲಿ ಮರು ಆಯ್ಕೆಯಾಗಿದ್ದರು. ಆದರೆ,ಮೂರನೇ ಅವಧಿಗೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಐಸಿಸಿ ಮಂಡಳಿಗೆ ತಿಳಿಸಿದ್ದಾರೆ ಎಂದು ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.