ಲೌಸನ್ನೆ, ಆ.23(DaijiworldNews/AA): ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಗುರುವಾರ ಸ್ವಿಜ್ಜರ್ಲ್ಯಾಂಡ್ನ ಲೌಸನ್ನೆ ಡೈಮಂಡ್ ಲೀಗ್ 2024 ರಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.
ನೀರಜ್ ಚೋಪ್ರಾ ಅವರು, ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ 89.49ಮೀ. ಎಸೆಸಿದ್ದಾರೆ. ಇದು ಸೀಸನ್ನ ಅತ್ಯುತ್ತಮ ಎಸೆತವಾಗಿದೆ. ಗ್ರೇನಡಾದ ಆಂಡರ್ಸನ್ ಪೀಟರ್ಸ್ ಅವರು 90.61ಮೀ ಎಸೆದರೆ, ನೀರಜ್ ಚೋಪ್ರಾ 89.49ಮೀ. ಎಸೆದಿದ್ದಾರೆ. ಹಾಗೂ ಜರ್ಮನಿಯ ಜೂಲಿಯಸ್ ವೇಬರ್ 87.08ಮೀ. ಎಸೆಯುವ ಮೂಲಕ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.
ಚೋಪ್ರಾ ಮೊದಲ ಪ್ರಯತ್ನದಲ್ಲಿ 82.10ಮೀ. ದೂರ ಎಸೆದರು. ತಮ್ಮ ಮೊದಲ 4 ಪ್ರಯತ್ನದವರೆಗೂ ಚೋಪ್ರಾ ಅವರು ಮೊದಲ ಮೂರು ಸ್ಥಾನಗಳಿಂದ ಹೊರಗುಳಿದ್ದರು. ತನ್ನ ಐದನೇ ಪ್ರಯತ್ನದಲ್ಲಿ 85.58ಮೀ ಎಸೆಯುವ ಮೂಲಕ ಮೂರನೇ ಸ್ಥಾನಕ್ಕೇರಿದರು. ಬಳಿಕ ತಮ್ಮ 6ನೇ ಹಾಗೂ ಕೊನೆಯ ಪ್ರಯತ್ನದಲ್ಲಿ 89.49ಮೀ. ದೂರ ಎಸೆಯುವ ಮೂಲಕ ಲೀಗ್ನ ಎರಡನೇ ಸ್ಥಾನ ಪಡೆದರು.
ಇನ್ನು ಲೌಸನ್ನೆ ಡೈಮಂಡ್ ಲೀಗ್ ನಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಸೆಪ್ಟೆಂಬರ್ನಲ್ಲಿ ಬ್ರಸೆಲ್ ನಲ್ಲಿ ನಡೆಯಲಿರುವ ಈವೆಂಟ್ನ ಫೈನಲ್ನಲ್ಲಿ ಅಗ್ರ ಆರು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.