ನವದೆಹಲಿ, ಸೆ.17 (DaijiworldNews/TA):ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಈ ಮೂವರು ಆಟಗಾರರು ಭಾರತಕ್ಕೆ "ಉನ್ನತ ಆಟಗಾರರು" ಆಗುತ್ತಾರೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿಯ 1 ನೇ ಟೆಸ್ಟ್ ಪಂದ್ಯದ ಮೊದಲು ಈ ಸುದ್ದಿಗೋಷ್ಠಿ ನಡೆದಿದೆ. ಸುದ್ದಿಗೋಷ್ಠಿಯಲ್ಲಿ "ಭಾರತವು ವಿಶ್ವದ ಎಲ್ಲಾ ಅಗ್ರ ತಂಡಗಳ ವಿರುದ್ಧ ಕ್ರಿಕೆಟ್ ಆಡಿದೆ. ಆದ್ದರಿಂದ, ಸಂಪೂರ್ಣ ವಿಭಿನ್ನ ತಂತ್ರವನ್ನು ರಚಿಸುವ ಅಗತ್ಯವಿಲ್ಲ" ಎಂದು ರೋಹಿತ್ ಹೇಳಿದ್ದಾರೆ.
ಕೆಎಲ್ ರಾಹುಲ್ ದೀರ್ಘ ಕಾಲದಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದು, ವಿದೇಶಗಳಲ್ಲಿ ಅತ್ಯುತ್ತಮ ಶತಕಗಳನ್ನು ಬಾರಿಸಿದ್ದಾರೆ. ಅವರು ಅತ್ಯುತ್ತಮ ಗುಣಮಟ್ಟದ ಬ್ಯಾಟ್ಸ್ಮನ್ ಮತ್ತು ಅದ್ಭುತ ಪ್ರತಿಭೆ ಎಂದು ರೋಹಿತ್ ಪ್ರಶಂಸಿಸಿದ್ದಾರೆ.
ರಾಹುಲ್ ಪುನರಾಗಮನವಾದ ನಂತರ ಅವರು ಸೌತ್ ಆಫ್ರಿಕಾದಲ್ಲಿ ಶತಕ ಬಾರಿಸಿದ್ದಾರೆ. ಹೈದರಾಬಾದ್ನಲ್ಲಿ ಅವರು 80 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಇದಾದ ಬಳಿಕ ಅವರು ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿದ್ದೇವೆ ಎಂಬುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಚೆನ್ನೈನಲ್ಲಿ ನಡೆದ ಅಭ್ಯಾಸದಲ್ಲಿ ಉತ್ತಮ ತಯಾರಿ ನಡೆಸಲಾಗಿದೆ. ದೀರ್ಘಾವಧಿಯ ಬಳಿಕ ಟೆಸ್ಟ್ ಆಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಕಠಿಣ ಪರಿಸ್ಥಿತಿಯಲ್ಲಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಿದ್ದು, ಸರ್ಫರಾಝ್ ಮತ್ತು ಜುರೆಲ್ ಕೂಡ ನಿರ್ಭೀತ ಆಟ ಪ್ರದರ್ಶಿಸಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.