ಇಂಗ್ಲೆಂಡ್, ಮೇ 28 (Daijiworld News/SM): ವಿಶ್ವಕಪ್ ಕ್ರಿಕೆಟ್ ನ ಅಭ್ಯಾಸ ಪಂದ್ಯಗಳು ಆರಂಭಗೊಂಡಿವೆ. ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಬ್ಬರಿಸಿದ್ದಾರೆ. ಹಾಗೂ ಎದುರಾಳಿಗಳಿಗೆ ತನ್ನ ಸಾಮಾರ್ಥ್ಯ ಪ್ರದರ್ಶಿಸಿದ್ದು, ಶತಕ ಸಿಡಿಸುವ ಮಿಂಚಿದ್ದಾರೆ.
ಧೋನಿಗೆ ಪ್ರಾಯ 37 ಆದರೂ ಯುವ ಕ್ರಿಕೆಟಿಗರಂತೆ ಕೀಪಿಂಗ್, ರನ್ನಿಂಗ್ ಮಾಡುವ ಧೋನಿ ಇಂದು ಬ್ಯಾಟಿಂಗ್ನಲ್ಲೂ ಕೂಡ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ. ಕೇವಲ 73 ಎಸೆತಗಳಲ್ಲಿ ಶತಕಗಳಿಸಿ ಮಿಂಚಿದ್ದಾರೆ. ತಂಡದ ಮೊತ್ತ 102ಕ್ಕೆ 4 ವಿಕೆಟ್ ಇದ್ದ ಸಂದರ್ಭದಲ್ಲಿ ಕ್ರೀಸಿಗಿಳಿದ ಧೋನಿ ಕನ್ನಡಿಗ ಕೆ.ಎಲ್. ರಾಹುಲ್ ಜೊತೆ ಸೇರಿ 5ನೇ ವಿಕೆಟ್ಗೆ 164 ರನ್ಗಳ ಜೊತೆಯಾಟವಾಡಿದರು.
ರಾಹುಲ್ ಔಟಾದ ನಂತರ ಪಾಂಡ್ಯ ಜೊತೆಗೂಡಿ 59 ರನ್ ಜೊತೆಯಾಟ ಆಡಿದ್ದಲ್ಲದೆ ಈ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಕೋರ್ 300 ಗಡಿದಾಟಿಸಿದರು. 72 ಎಸೆತದಲ್ಲಿ 99ರನ್ಗಳಿಸಿದ್ದ ಧೋನಿ 73ನೇ ಎಸೆತವನ್ನು ಸಿಕ್ಸರ್ಗಟ್ಟಿ ಎದುರಾಳಿಗಳಿಗೆ ಶಾಕ್ ನೀಡಿದರು. ತಾನು ಎದುರಿಸಿದ 78 ಎಸೆತಗಳಲ್ಲಿ 113 ರನ್ ಸಿಡಿಸಿದ ಧೋನಿ ಎಲ್ಲರ ಮನ ಗೆದ್ದರು.
ಸದ್ಯ ಅಭ್ಯಾಸ ಪಂದ್ಯದಲ್ಲೇನೋ ಧೋನಿ ಮಿಂಚಿದ್ದಾರೆ, ಶತಕ ಸಿಡಿಸಿದ್ದಾರೆ. ಆದರೆ, ಈ ಫಾರ್ಮ್ ಮುಂದೆ ನಡೆಯಲಿರುವ ಲೀಗ್ ಪಂದ್ಯಗಳಲ್ಲಿ ಪ್ರದರ್ಶಿಸುವ ಅಗತ್ಯವಿದೆ. ಲೀಗ್ ಪದ್ಯಗಳಲ್ಲಿ ಪ್ರಚಂಡ ಆಟ ಪ್ರದರ್ಶನಗೊಂಡಲ್ಲಿ ಮತ್ತೊಮ್ಮೆ ಟೀಂ ಇಂಡಿಯಾ ಪಾಲಿಗೆ ವಿಶ್ವಕಪ್ ಕಿರೀಟ ಸಿಗುವುದರಲ್ಲಿ ಅನುಮಾನವೇ ಇಲ್ಲ.