ಇಂಗ್ಲೆಂಡ್, ಮೇ 29 (Daijiworld News/SM): ಕ್ರಿಕೆಟ್ ಇತಿಹಾಸ ಆರಂಭವಾಗಿದ್ದು ಇಂಗ್ಲೆಂಡ್ ದೇಶದಿಂದ. ಇಂಗ್ಲೆಂಡ್ ಪರಿಚಯಿಸಿದ ಕ್ರಿಕೆಟ್ ಇಂದು ದೇಶದೆಲ್ಲೆಡೆ ಪ್ರಸಿದ್ದಿಯನ್ನು ಗಳಿಸಿಕೊಂಡಿದೆ. ಆದರೆ, ಗಮನಿಸಬೇಕಾದ ಸಂಗತಿಯೊಂದು ಇಲ್ಲಿದೆ. ತನ್ನ ನಾಡಿನಲ್ಲಿ ಜನ್ಮ ನೀಡಿದ ಕ್ರಿಕೆಟ್ ನ ವಿಶ್ವಕಪ್ ಗೆಲ್ಲಲು ಇಂಗ್ಲೆಂಡ್ ತಂಡಕ್ಕೆ ಇದುವರೆಗೂ ಸಾಧ್ಯವಾಗಿಲ್ಲ.
ಒಂದು ಬಾರಿಯೂ ವಿಶ್ವಕಪ್ ಕ್ರಿಕೆಟನ್ನು ಇಂಗ್ಲೆಂಡ್ ಗೆದ್ದಿಲ್ಲ ಎನ್ನುವುದು ಪ್ರಮುಖ ಸಂಗತಿಯಾಗಿದೆ. ಒಟ್ಟಾರೆಯಾಗಿ ಇದುವರೆಗೂ ನಡೆದಿರುವ 11 ವಿಶ್ವಕಪ್ ಟೂರ್ನಿಗಳಲ್ಲಿ ಇಂಗ್ಲೆಂಡ್ ಹೇಳಿಕೊಳ್ಳೋಕಾದರು ಕಪ್ ಎತ್ತಿರುವ ಇತಿಹಾಸವಿಲ್ಲ.
ಮೂರು ಬಾರಿ ಫೈನಲ್ ಪ್ರವೇಶ ಪಡೆದಿರುವ ಇಂಗ್ಲೆಂಡ್ ಕಪ್ ಗೆಲ್ಲೋಕೆ ವಿಫಲವಾಗಿದೆ. ಎರಡು ಬಾರಿ ಸೆಮಿಫೈನಲ್ ಹಾಗೂ ಎರಡು ಸಲ ಕ್ವಾರ್ಟರ್ ಫೈನಲ್ ಹಂತದಲ್ಲೇ ಇಂಗ್ಲೆಂಡ್ ಮುಗ್ಗರಿಸಿದೆ. 1 ಸಲ ಸೂಪರ್ ೮ರ ಹಂತದಲ್ಲಿ ಮುಗ್ಗರಿಸಿದರೆ, ಮೂರು ಬಾರಿ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ಬಿದ್ದಿರುವ ಇತಿಹಾಸ ಇಂಗ್ಲೆಂಡ್ ತಂಡದ್ದು.
1972ರಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್ ವೆಸ್ಟ್ ಇಂಡೀಸ್ ಗೆ ಶರಣಾಯಿತು. 1987ರಲ್ಲಿ ಫೈನಲ್ ಗೆ ಲಗ್ಗೆ ಇಟ್ಟ ತಂಡಕ್ಕೆ ಆಸ್ಟ್ರೇಲಿಯಾ ಸಿಂಹಸ್ವಪ್ನವಾಗಿ ಕಾಡಿತ್ತು. 1992ರ ವರ್ಲ್ಡ್ ಕಪ್ ಪಂದ್ಯದಲ್ಲಿ ಅಂತಿಮ ಹಂತಕ್ಕೆ ಎಂಟ್ರಿಯಾಗಿದ್ದ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧ ಮಡಿಯೂರಿತ್ತು. 1992ರ ವಿಶ್ವಕಪ್ ಗೆದ್ದು ಪಾಕಿಸ್ತಾನ ತಂಡ ಬೀಗಿತ್ತು. ಆ ಟೂರ್ನಿಯಲ್ಲಿ ಭಾರತ ತಂಡ ಲೀಗ್ ಹಂತದಲ್ಲೇ ಹೊರ ಬಿದ್ದಿತ್ತು.
ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡವೂ ಕೂಡ ಬಲಿಷ್ಟ ತಂಡಗಳಲ್ಲೊಂದಾಗಿದೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಗೊಂಡಿರುವ ವಿಶ್ವ ರ್ಯಾಂಕಿಂಗ್ ನಲ್ಲಿ ಇಂಗ್ಲೆಂಡ್ ನಂ. 1 ಸ್ಥಾನದಲ್ಲಿದೆ. ಆದರೆ, ವಿಶ್ವಕಪ್ ಎತ್ತುವ ಭಾಗ್ಯ ಮಾತ್ರ ಇದುವರೆಗೂ ಒದಗಿ ಬಂದಿಲ್ಲ.
ಪ್ರತಿ ಬಾರಿ ಟೂರ್ನಿಗೆ ಎಂಟ್ರಿ ನೀಡುವ ಸಂದರ್ಭದಲ್ಲೂ ಕೂಡ ಪ್ರಶಸ್ತಿ ಗೆಲ್ಲಲೇ ಬೇಕೆಂಬ ತವಕದಲ್ಲಿ ಇಂಗ್ಲೆಂಡ್ ಆಟವಾಡುತ್ತಿತ್ತು. ಆದರೆ ಗೆಲುವು ದಾಖಲಿಸಿಲ್ಲ. ಈ ಬಾರಿ ಅದೇ ಉತ್ಸಾಹ ಇಂಗ್ಲೆಂಡ್ ತಂಡದ ಆಟಗಾರರಲ್ಲಿದೆ. ಆದರೆ ಯಾವ ಪ್ರದರ್ಶನ ನೀಡುತ್ತೆ ಎನ್ನುವುದು ಪಂದ್ಯಗಳು ಆರಂಭವಾದ ಬಳಿಕವಷ್ಟೇ ತಿಳಿಯಬಹುದಾಗಿದೆ.