ನವದೆಹಲಿ, ಅ. 10(DaijiworldNews/TA):ಜೋ ರೂಟ್ ಮುಲ್ತಾನ್ ಟೆಸ್ಟ್ನಲ್ಲಿ ಪಾಕಿಸ್ತಾನ ವಿರುದ್ಧ ದ್ವಿಶತಕ ಸಿಡಿಸಿದ್ದಾರೆ. ಪಾಕ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡುತ್ತಿರುವ ರೂಟ್ ಮೊದಲ ಇನ್ನಿಂಗ್ಸ್ನಲ್ಲೇ ಅಮೋಘ ಶತಕ ಸಿಡಿಸಿದ್ದಾರೆ. 167 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 100 ರನ್ ಬಾರಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿಅತಿಹೆಚ್ಚು ರನ್ ಗಳಿಸಿದ ವಿಶ್ವದ 5ನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಜೋ ರೂಟ್ 80 ರನ್ ಸಿಡಿಸುತ್ತಿದ್ದಂತೆ 12,473 ರನ್ ಪೂರೈಸಿದರು. ಈ ಮೂಲಕ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲಸ್ಟೈರ್ ಕುಕ್ ಅವರ 12,472 ರನ್ಗಳ ದಾಖಲೆ ಮುರಿದಿದ್ದಾರೆ.ಪ್ರಸ್ತುತ ಆಡುತ್ತಿರುವ ಆಟಗಾರರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 20 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇದೀಗ 20 ಸಾವಿರ ರನ್ಗಳಿಸಿದ ಸಕ್ರಿಯ ಬ್ಯಾಟರ್ಗಳ ಪಟ್ಟಿಗೆ ಜೋ ರೂಟ್ ಕೂಡ ಎಂಟ್ರಿ ಕೊಟ್ಟಿದ್ದಾರೆ. 2012 ರಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುತ್ತಿರುವ ರೂಟ್ ಒಟ್ಟು 457 ಇನಿಂಗ್ಸ್ಗಳಿಂದ 20,000 ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 2ನೇ ಆ್ಯಕ್ಟೀವ್ ಪ್ಲೇಯರ್ ಎನಿಸಿಕೊಂಡಿದ್ದಾರೆ.