ಹೈದರಾಬಾದ್, ಅ.12(DaijiworldNews/TA):ಬಾಂಗ್ಲಾದೇಶ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದ ವೇಳೆ ಭಾರತದ ವಿಕೆಟ್ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಇಂದು ತಮ್ಮ ಚೊಚ್ಚಲ T20I ಶತಕವನ್ನು ಸಿಡಿಸಿದ್ದಾರೆ.ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಸಂಜು ಒಂದೇ ಓವರ್ನಲ್ಲಿ ಸತತ 5 ಸಿಕ್ಸರ್ ಬಾರಿಸಿ ಐತಿಹಾಸಿಕ ಸಾಧನೆ ಮಾಡಿದರು.
ರಿಶಾದ್ ಹುಸೇನ್ ಎಸೆದ 10ನೇ ಓವರ್ನಲ್ಲಿ ಸತತ 5 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಸಂಜು ಓವರ್ನಲ್ಲಿ ಒಟ್ಟು 30 ರನ್ ಕಲೆಹಾಕಿದರು. ಆ ಬಳಿಕ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಸಂಜು, ಆ ನಂತರವೂ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದರು.
ಹೈದರಾಬಾದ್ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದ ವೇಳೆ ಭಾರತದ ವಿಕೆಟ್ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಶನಿವಾರ ತಮ್ಮ ಚೊಚ್ಚಲ T20I ಶತಕವನ್ನು ಸಿಡಿಸಿದ್ದಾರೆ. T20I ನಲ್ಲೇ ವೇಗದ ಶತಕ ಸಿಡಿಸಿದ ಎರಡನೇ ಭಾರತೀಯ ಎಂಬ ದಾಖಲೆಯನ್ನು ಮಾಡಿದ್ದಾರೆ. ಕೊನೆಗೆ 117 (47) ರನ್ ಗಳಿಸಿ, ಮುಸ್ತಾಫಿಜುರ್ ರೆಹಮಾನ್ ಬೌಲಿಂಗ್ನಲ್ಲಿ ಔಟಾದರು ಎನ್ನಲಾಗಿದೆ.