ಬೆಂಗಳೂರು,ಅ.16(DaijiworldNews/AK): ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಸತತವಾಗಿ ಸುರಿದ ಮಳೆಯಿಂದಾಗಿ ಅಡಚಣೆಯಾಗಿದೆ. ಇದರಿಂದಾಗಿ ಟಾಸ್ ಕಾಣದೇ ಮೊದಲ ದಿನದಾಟ ರದ್ದುಗೊಂಡಿದೆ.
ಇಂದು ಬೆಳಿಗ್ಗೆಯಿಂದಲೇ ಉದ್ಯಾನನಗರಿಯಲ್ಲಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಚಿನ್ನಸ್ವಾಮಿ ಕ್ರೀ ಡಾಂಗಣದಲ್ಲಿ ನೆರೆದಿದ್ದ ಅಭಿಯಾನಿಗಳಿಗೆನಿರಾಸೆಯಾಗಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಊಟದ ವಿರಾಮವನ್ನು ಬೇಗನೇ ತೆಗೆದುಕೊಳ್ಳಲಾಯಿತು.
ಬಳಿಕ ಮೋಡಕವಿದ ವಾತಾವಾರಣ ಹಾಗೂ ತುಂತುರು ಮಳೆ ಮುಂದುವರಿದ ಹಿನ್ನೆಲೆಯಲ್ಲಿ ದಿನದಾಟ ರದ್ದುಗೊಳಿಸಲು ಅಂಪೈರ್ಗಳು ನಿರ್ಧ ರಿಸಿದ್ದಾರೆ. ಇದರಿಂದಾಗಿ ಟಾಸ್ ಕೂಡ ಕಾಣದೇ ಮೊದಲ ದಿನದಾಟ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.