ನಾಟಿಂಗ್ಹ್ಯಾಮ್, ಜೂ 04(Daijiworld News/SM): ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಕೇವಲ ಅಲ್ಪ ಮೊತ್ತ ಕಲೆ ಹಾಕಿ ಹೀನಾಯವಾಗಿ ಸೋಲುಂಡಿದ್ದ ಪಾಕಿಸ್ತಾನ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಪಾಕ್ ಬೃಹತ್ ಮೊತ್ತ ಪೆರಿಸಿತು. 50 ಓವರ್ ಗಳಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು 348 ರನ್ ಗಳನ್ನು ಪೇರಿಸಿತು. ವಿಶೇಷವೆಂದರೆ ಈ ಬೃಹತ್ ಮೊತ್ತ ಪೇರಿಸಿದ ಪಾಕಿಸ್ತಾನ ಯಾವೊಬ್ಬ ಆಟಗಾರನೂ ಕೂಡ ಮೂರಂಕಿ ಗಡಿ ದಾಟಿಲ್ಲ. ಮಹಮ್ಮದ್ ಹಫೀಜ್ ಸಿಡಿಸಿದ ೮೪ ರನ್ ಗಳೇ ತಂಡದಲ್ಲಿ ಅತ್ಯಧಿಕ ರನ್ ಎನಿಸಿತು.
ಇನ್ನು ಪಾಕಿಸ್ತಾನ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನಟ್ಟುವುದು ಬಲಿಷ್ಠ ಹಾಗೂ ಈ ಬಾರಿಯ ಫೆವರೆಟ್ ತಂಡಗಳಲ್ಲೊಂದಾಗಿರುವ ಇಂಗ್ಲೆಂಡ್ ಗೆ ಕಷ್ಟದ ಕೆಲಸವೇನೂ ಆಗಿರಲಿಲ್ಲ. ಇಂಗ್ಲೆಂಡ್ ಪರ ಜೋ ರೂಟ್ ಹಾಗೂ ಜಸ್ ಬಟ್ಲರ್ ಶತಕ ಸಿಡಿಸಿ ಮಿಂಚಿದರು. ಈ ಇಬ್ಬರ ಶತಕದ ಹೊರತಾಗಿಯೂ ಇಂಗ್ಲೆಂಡ್ ತಂಡಕ್ಕೆ ಗೆಲುವು ಮಾತ್ರ ಕನಸಿನ ಮಾತಾಯಿತು.
ಅಂತಿಮವಾಗಿ ಇಂಗ್ಲೆಂಡ್ ತಂಡ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 334 ರನ್ ಪೇರಿಸಲಷ್ಟೇ ಶಕ್ತವಾಯಿತು. ಅಲ್ಲದೆ ಪಂದ್ಯ ಸೋತು ಪಾಕಿಸ್ತಾನಕ್ಕೆ ಶರಣಾಯಿತು. ಆ ಮೂಲಕ ಪಾಕಿಸ್ತಾನ ತಂಡ ತಾವು ಕೂಡ ಬಲಿಷ್ಟವಾಗಿದ್ದೇವೆ ಎಂಬುವುದನ್ನು ಸಾಬೀತುಪಡಿಸಿದರು.