ಮುಂಬೈ, ಡಿ.16(DaijiworldNews/TA): ಇಂಗ್ಲೆಂಡ್ ವಿರುದ್ಧ ಅತ್ಯಾಕರ್ಷಕ ಸೆಂಚುರಿ ಸಿಡಿಸುವ ಮೂಲಕ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇನ್ ವಿಲಿಯಮ್ಸನ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಹ್ಯಾಮಿಲ್ಟನ್ ಸೆಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ವಿಲಿಯಮ್ಸನ್ ಭರ್ಜರಿ ಶತಕ ಬಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ದ್ವಿತೀಯ ಇನಿಂಗ್ಸ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲಿಯಮ್ಸನ್ 204 ಎಸೆತಗಳನ್ನು ಎದುರಿಸಿದರು. ಈ ವೇಳೆ 1 ಸಿಕ್ಸ್ ಹಾಗೂ 20 ಫೋರ್ಗಳೊಂದಿಗೆ 156 ರನ್ ಬಾರಿಸಿ ಮಿಂಚಿದರು. ನ್ಯೂಝಿಲೆಂಡ್ನ ಸೆಡನ್ ಪಾರ್ಕ್ ಮೈದಾನದಲ್ಲಿ ಆಡಿದ ಕಳೆದ 5 ಪಂದ್ಯಗಳಲ್ಲೂ ವಿಲಿಯಮ್ಸನ್ ಬ್ಯಾಟ್ನಿಂದ ಸೆಂಚುರಿ ಮೂಡಿಬಂದಿವೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಮೈದಾನದಲ್ಲಿ ಸತತ 5 ಶತಕ ಸಿಡಿಸಿದ ವಿಶೇಷ ದಾಖಲೆಯೊಂದು ಕೇನ್ ವಿಲಿಯಮ್ಸನ್ ಪಾಲಾಗಿದೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಕೇನ್ ವಿಲಿಯಮ್ಸನ್ ಶತಕ ಸಿಡಿಸಿದ್ದು, ಈ ಸೆಂಚುರಿ ನೆರವಿನಿಂದ ನ್ಯೂಝಿಲೆಂಡ್ ತಂಡವು 400 ಕ್ಕೂ ಅಧಿಕ ರನ್ ಕಲೆಹಾಕಿ ಬ್ಯಾಟಿಂಗ್ ಮುಂದುವರೆಸಿದೆ ಎನ್ನಲಾಗಿದೆ.