ಮೆಲ್ಬೋರ್ನ್, ಡಿ.27(DaijiworldNews/AA): ಮೆಲ್ಬೋರ್ನ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಒಂದೇ ಒಂದು ವಿಕೆಟ್ ಪಡೆಯದೆ ಬೇಡದ ದಾಖಲೆ ನಿರ್ಮಿಸಿದ್ದಾರೆ.
ಮೆಲ್ಬೋರ್ನ್ ಟೆಸ್ಟ್ನಲ್ಲಿ ಆತಿಥೇಯ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 474 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಬೃಹತ್ ಮೊತ್ತ ಕಲೆ ಹಾಕಲು ಟೀಂ ಇಂಡಿಯಾದ ಬೌಲಿಂಗ್ ವಿಭಾಗವೂ ಒಂದು ಕಾರಣವೆಂದರೆ ತಪ್ಪಾಗಲಾರದು.
ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮೂರು ವಿಕೆಟ್, ಆಕಾಶ್ ದೀಪ್ ಎರಡು ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ ಕೂಡ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಮೊದಲ ಇನ್ನಿಂಗ್ಸ್ನಲ್ಲಿ 23 ಓವರ್ಗಳನ್ನು ಬೌಲ್ ಮಾಡಿದ ಸಿರಾಜ್ ಒಂದೇ ಒಂದು ವಿಕೆಟ್ ಪಡೆಯದೆ ಬೇಡದ ದಾಖಲೆ ಬರೆದಿದ್ದಾರೆ. ಜೊತೆಗೆ ಸಿರಾಜ್ 100 ಕ್ಕೂ ಅಧಿಕ ರನ್ ನೀಡಿದ್ದಾರೆ.