ಮೆಲ್ಬೋರ್ನ್, ಡಿ.28(DaijiworldNews/AA): ಬಾರ್ಡರ್ - ಗವಾಸ್ಕರ್ ಟ್ರೋಫಿ ಸರಣಿಯ 4ನೇ ಟೆಸ್ಟ್ನ 3ನೇ ದಿನದ ಅಂತ್ಯಕ್ಕೆ ಟೀಂ ಇಂಡಿಯಾದ ಯುವ ಆಲ್ರೌಂಡರ್ಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಅವರ 127 ರನ್ಗಳ ಜೊತೆಯಾಟ ಭಾರತವನ್ನು ಸೋಲಿನಿಂದ ಪಾರು ಮಾಡಿದೆ. ಜೊತೆಗೆ ಈ ಜೋಡಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಹಲವು ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿದೆ.
ಆಸ್ಟ್ರೇಲಿಯಾ ನೀಡಿದ 474 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿರುವ ಟೀಂ ಇಂಡಿಯಾ 3ನೇ ದಿನದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 358 ರನ್ ಗಳಿಸಿದೆ. ಇದರಿಂದ ಬಾಕ್ಸಿಂಗ್ ಡೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಇನ್ನೂ 116 ರನ್ ಗಳಿಸಬೇಕಿದೆ. 8ನೇ ವಿಕೆಟ್ಗೆ ನಿತೀಶ್-ಸುಂದರ್ ಅವರ ಶತಕದ ಜೊತೆಯಾಟದಿಂದ ಭಾರತ, ಫಾಲೋ ಆನ್ನಿಂದ ಬಚಾವ್ ಆಗಿದೆ.
ಟೀಂ ಇಂಡಿಯಾದ ಅನುಭವಿ ಬ್ಯಾಟರ್ಗಳು ಆಸೀಸ್ ಬೌಲರ್ಗಳ ದಾಳಿಗೆ ಶರಣಾದರೆ, ಆಸೀಸ್ ನೆಲದಲ್ಲಿ ಹೆಚ್ಚು ಆಡಿರುವ ಅನುಭವವಿರದ ಹಾಗೂ ಇದೇ ಮೊದಲ ಬಾರಿಗೆ ಆಡುತ್ತಿರುವ ನಿತೀಶ್-ಸುಂದರ್ ತಂಡವನ್ನು ಸೋಲಿನಿಂದ ಬಚಾವ್ ಮಾಡಿದೆ.
8ನೇ ವಿಕೆಟ್ಗೆ ನಿತೀಶ್-ಸುಂದರ್ ಅವರಿಂದ ಬರೋಬ್ಬರಿ 127 ರನ್ಗಳ ಉತ್ತಮ ಜೊತೆಯಾಟ ಬಂದಿತ್ತು. ಈ ಮೂಲಕ ಆಸೀಸ್ ನೆಲದಲ್ಲಿ ಅಪರೂಪದ ದಾಖಲೆಗಳನ್ನು ಮಾಡಿದ ಈ ಜೋಡಿ ಆಸ್ಟ್ರೇಲಿಯಾ ವಿರುದ್ಧ ಎಂಟನೇ ಅಥವಾ ಅದಕ್ಕಿಂತ ಕೆಳಗಿನ ವಿಕೆಟ್ಗೆ ಟೀಂ ಇಂಡಿಯಾ ಕಲೆಹಾಕಿದ ಎರಡನೇ ಗರಿಷ್ಠ ಜೊತೆಯಾಟ ಎಂಬ ದಾಖಲೆ ಸೃಷ್ಟಿಸಿತು.
ಇನ್ನು ಆಸ್ಟ್ರೇಲಿಯಾದಲ್ಲಿ ಟೆಸ್ಟ್ನ ಒಂದೇ ಇನ್ನಿಂಗ್ಸ್ನಲ್ಲಿ ಭಾರತದ 8ನೇ ಕ್ರಮಾಂಕ ಮತ್ತು 9ನೇ ಕ್ರಮಾಂಕದ ಬ್ಯಾಟ್ಸ್ಮನ್ಗಳು 50ಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ನಿದರ್ಶನ ಇದಾಗಿದೆ. ಜೊತೆಗೆ ಸುಂದರ್ ಮತ್ತು ನಿತೀಶ್ ಕುಮಾರ್ ಇಬ್ಬರೂ ಸೇರಿ ತಮ್ಮ ಇನ್ನಿಂಗ್ಸ್ನಲ್ಲಿ ತಲಾ 150 ಎಸೆತಗಳನ್ನು ಆಡುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ತಂಡದ 8 ಮತ್ತು 9ನೇ ಕ್ರಮಾಂಕದ ಬ್ಯಾಟ್ಸ್ಮನ್ಗಳು ಅಧಿಕ ಎಸೆತಗಳನ್ನು ಆಡಿದ ದಾಖಲೆಯೂ ಈ ಜೋಡಿಯ ಪಾಲಾಗಿದೆ.