ಉಡುಪಿ, ಜ.11 (DaijiworldNews/AA): ಉಡುಪಿಯ ಮಧುಮೇಹ ತಜ್ಞೆ ಡಾ.ಶ್ರುತಿ ಬಲ್ಲಾಳ್ ಅವರು ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ಶಿಪ್ನ ಹೈಜಂಪ್ ಮಹಿಳೆಯರ 30 ಪ್ಲಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಜನವರಿ 10ರಂದು ಅಥ್ಲೆಟಿಕ್ಸ್ ಪಂದ್ಯಗಳು ನಡೆದವು. ಈ ಪಂದ್ಯದಲ್ಲಿ ಡಾ.ಶ್ರುತಿ ಬಲ್ಲಾಳ್ ಭಾರತವನ್ನು ಪ್ರತಿನಿಧಿಸಿದ್ದರು.
ಡಾ. ಶ್ರುತಿ ಬಲ್ಲಾಳ್ ಅವರು ಪ್ರತಿಭಾವಂತ ಮಾಡೆಲ್ ಕೂಡ ಆಗಿದ್ದಾರೆ. ಡಾ. ಶ್ರುತಿ ಅವರು 'ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಟೂರಿಸಂ 2024' ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಜೊತೆಗೆ ಅವರು ಫಿಲಿಪೈನ್ಸ್ನ ಮನಿಲಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ "ಮಿಸೆಸ್ ಅರ್ಥ್ ಇಂಟರ್ನ್ಯಾಶನಲ್ 2024" ನ ರಾಯಭಾರಿಯಾಗಿದ್ದರು.
ಡಾ. ಶ್ರುತಿ ಬಲ್ಲಾಳ್ ಅವರು ತಮ್ಮ ವೃತ್ತಿಜೀವನವನ್ನು ಮಧುಮೇಹ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಗೆ ಮೀಸಲಿಟ್ಟಿದ್ದಾರೆ. ಅವರು ತಳಮಟ್ಟದಲ್ಲಿ 100 ಕ್ಕೂ ಹೆಚ್ಚು ಉಚಿತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.