ನಾಟಿಂಗ್ಹ್ಯಾಮ್, ಜೂ 11(Daijiworld News/SM): ಭಾರತ ಕ್ರಿಕೆಟ್ ತಂಡಕ್ಕೆ ತೀವ್ರ ಎದುರಾಗಿದೆ. ಗಾಯಾಳುವಾಗಿರುವ ಆರಂಭಿಕ ಆಟಗಾರ ಶಿಖರ್ ಧವನ್ ಒಂದೆರಡು ಪಂದ್ಯಗಳು ನಡೆಯುತ್ತಿದ್ದಂತೆ ವಿಶ್ವಕಪ್ ನಿಂದಲೇ ಹೊರಬಿದ್ದಿದ್ದಾರೆ. ಜೂನ್ 9ರಂದು ನಡೆದಿದ್ದ ಆಸಿಸ್ ವಿರುದ್ಧದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದ ಧವನ್ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಲು ಪ್ರಮುಖ ಕಾರಣರಾಗಿದ್ದರು.
ಆದರೆ ಇದೀಗ ಅವರಿಗೆ ಗಾಯದ ಸಮಸ್ಯೆ ಪಂದ್ಯದಿಂದಲೇ ಹೊರ ನಡೆಯುವಂತೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಓವಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆಸಿಸ್ ವೇಗಿ ನಥಾನ್ ಕೌಲ್ಟರ್ ನೀಲ್ ಎಸೆತದ ಚೆಂಡು ಆಕಸ್ಮಿಕವಾಗಿ ಧವನ್ ಅವರ ಕೈಬೆರಳಿಗೆ ಬಡಿದು ಗಾಯಗೊಂಡಿದ್ದರು.
ಶಿಖರ್ ಧವನ್ ಅವರಿಗೆ ಮೂರು ವಾರಗಳ ಕಾಲ ವಿಶ್ರಾಂತಿ ಅಗತ್ಯ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ಬೆರಳಿಗೆ ಆಗಿರುವ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಮಾಡಲಾಗಿತ್ತು. ಇದಾದ ಬಳಿಕ ಬಂದ ವರದಿ ಪರಿಶೀಲಿಸಿದ ವೈದ್ಯರು, ಧವನ್ ಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಇನ್ನು ಆಸಿಸ್ ಪಂದ್ಯವಾಡುತ್ತಿದ್ದ ವೇಳೆ ಗಾಯಗೊಂಡಿದ್ದರೂ ಕೂಡ ಧವನ್ ಲೆಕ್ಕಿಸಿರಲಿಲ್ಲ. ಗಾಯದ ನೋವನ್ನು ಸಹಿಸಿಕೊಂಡಿ ಬ್ಯಾಟ್ ಬೀಸಿದ್ದರು. ಹಾಗೂ ಶತಕ ಪೂರೈಸಿದ್ದರು.