ಮುಂಬೈ,ಜ.28 (DaijiworldNews/AK): ಅಂಡರ್ 19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ವಿಜಯದ ಕಡೆ ಮುನ್ನುಗ್ಗಿದೆ. ಸೂಪರ್ ಸಿಕ್ಸ್ ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿ ಸೆಮಿಫೈನಲ್ಗೆ ಪ್ರವೇಶಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 208 ರನ್ಗಳ ಬೃಹತ್ ಮೊತ್ತ ಪಡೆಯಿತು. ಇದರ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡ ಕೇವಲ 58 ರನ್ ಗಳಿಗೆ ಆಲೌಟ್ ಆಯಿತು.
ಟೀಂ ಇಂಡಿಯಾ ಪರ ಆಲ್ರೌಂಡರ್ ಪ್ರದರ್ಶನ ನೀಡಿದ ಗೊಂಗಡಿ ತ್ರಿಶಾ ಮೊದಲು ಬ್ಯಾಟಿಂಗ್ನಲ್ಲಿ ಕೇವಲ 59 ಎಸೆತಗಳಲ್ಲಿ 110 ರನ್ಗಳ ಬಿರುಸಿನ ಇನಿಂಗ್ಸ್ ಆಡಿದರೆ, ಇದಾದ ಬಳಿಕ ಬೌಲಿಂಗ್ನಲ್ಲೂ ಮ್ಯಾಜಿಕ್ ಪ್ರದರ್ಶಿಸಿ 6 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾದ ಗೆಲುವು ಪಡೆದುಕೊಂಡಿದ್ದಾರೆ.