ಮುಂಬೈ,ಜ.29(DaijiworldNews/AK): ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟೀವ್ ಸ್ಮಿತ್ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಗಾಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 1 ರನ್ ಗಳಿಸುವ ಮೂಲಕ ಸ್ಟೀವ್ ಸ್ಮಿತ್ ಟೆಸ್ಟ್ನಲ್ಲಿ 10000 ರನ್ ಪೂರೈಸಿದ್ದಾರೆ. ಈ ಮೂಲಕ ಸಾಧನೆ ಮಾಡಿದ ಆಸ್ಟ್ರೇಲಿಯಾದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್ (13378) ಹಾಗೂ ಅಲನ್ ಬಾರ್ಡರ್ (11174) ಈ ದಾಖಲೆ ಬರೆದಿದ್ದರು. ಇದೀಗ ಈ ಸಾಧಕ ಪಟ್ಟಿಗೆ ಸ್ಟೀವ್ ಸ್ಮಿತ್ ಕೂಡ ಎಂಟ್ರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ಇತಿಹಾಸದಲ್ಲಿ 10 ಸಾವಿರ ರನ್ ಕಲೆಹಾಕಿದ ವಿಶ್ವದ 15ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಈ ಸಾಧನೆಯೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 10 ಸಾವಿರ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ 5ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಐದನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ರಾಹುಲ್ ದ್ರಾವಿಡ್ ಇದ್ದರು. ದ್ರಾವಿಡ್ 206 ಇನಿಂಗ್ಸ್ಗಳ ಮೂಲಕ 10 ಸಾವಿರ ರನ್ ಪೂರೈಸಿದ್ದರು.
ಇದೀಗ ಸ್ಟೀವ್ ಸ್ಮಿತ್ 205 ಇನಿಂಗ್ಸ್ಗಳ ಮೂಲಕ 10 ಸಾವಿರ ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ನಲ್ಲಿ ಅತೀ ವೇಗವಾಗಿ 10 ಸಾವಿರ ರನ್ಗಳ ಮೈಲುಗಲ್ಲು ಮುಟ್ಟಿದ ವಿಶ್ವದ 5ನೇ ಬ್ಯಾಟರ್ ಹಾಗೂ ಆಸ್ಟ್ರೇಲಿಯಾದ 2ನೇ ಬ್ಯಾಟರ್ ಆಗಿದ್ದಾರೆ.