ಮುಂಬೈ, ಫೆ.01 (DaijiworldNews/AK): ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನ ಫೈನಲ್ ಪಂದ್ಯ ನಾಳೆ ಫೆಬ್ರವರಿ 2 ರ ಭಾನುವಾರದಂದು ಕೌಲಾಲಂಪುರದ ಬಯುಮಾಸ್ ಓವಲ್ನಲ್ಲಿ ನಡೆಯಲಿದೆ.

ಈ ಪ್ರಶಸ್ತಿ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಹಾಗೂ ಇದೇ ಮೊದಲ ಬಾರಿಗೆ ಫೈನಲ್ಗೆ ಅರ್ಹತೆ ಪಡೆದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡದ ನಡುವೆ ನಡೆಯಲಿದೆ. ಟೂರ್ನಿಯಲ್ಲಿ ಇದುವರೆಗೆ ಅಜೇಯವಾಗಿರುವ ಭಾರತ ತಂಡ ಫೈನಲ್ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನವನ್ನು ಮುಂದುವರಿಸಲಿದೆಯಾ.
ಇತ್ತ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ದಕ್ಷಿಣ ಆಫ್ರಿಕಾ ಕೂಡ ಟೀಂ ಇಂಡಿಯಾವನ್ನು ಮಣಿಸುವ ಯೋಜನೆ ಹಾಕಿದೆ. ಈ ಟೂರ್ನಿಯಲ್ಲಿ ಉಭಯ ತಂಡಗಳು ಬಲಿಷ್ಠ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿರುವುದರಿಂದ ನಾಳಿನ ಪಂದ್ಯದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಭಾರತ: ನಿಕಿ ಪ್ರಸಾದ್ (ನಾಯಕಿ), ಸನಿಕಾ ಚಲಾಕೆ, ಗೊಂಗಡಿ ತ್ರಿಶಾ, ಕಮಲಿನಿ ಜಿ, ಭಾವಿಕಾ ಅಹಿರೆ, ಈಶ್ವರಿ ಅವಸಾರೆ, ಮಿಥಿಲಾ ವಿನೋದ್, ಜೋಶಿತಾ ವಿಜೆ, ಸೋನಮ್ ಯಾದವ್, ಪರುಣಿಕಾ ಸಿಸೋಡಿಯಾ, ಕೇಸರಿ ದೃತಿ, ಆಯುಷಿ ಶುಕ್ಲಾ, ಆನಂದಿತ ಕಿಶೋರ್, ಎಂಡಿ ಶಬ್ನಮ್, ವೈಷ್ಣವಿ ಶರ್ಮಾ.
ದಕ್ಷಿಣ ಆಫ್ರಿಕಾ: ಸಿಮೋನೆ ಲಾರೆನ್ಸ್, ಕರಾಬೊ ಮೆಸೊ, ಕೈಲಾ ರೆನೆಕೆ (ನಾಯಕಿ), ಗೆಮ್ಮಾ ಬೋಥಾ, ಸೆಶ್ನಿ ನಾಯ್ಡೂ, ಡಯಾರಾ ರಾಮ್ಲಕನ್, ಮೊನಾಲಿಸಾ ಲೆಗೊಡಿ, ನ್ಥಾಬಿಸೆಂಗ್ ನಿನಿ, ಫಾಯೆ ಕೌಲಿಂಗ್, ಜೆ-ಲೀ ಫಿಲಾಂಡರ್, ಲುಯಾಂಡಾ ನ್ಜುಜಾ, ಡೀ ವ್ಯಾನ್ ರೆನ್ಸ್ಬರ್ಗ್, ಮೀಕೆ ವ್ಯಾನ್ ವೂರ್ಸ್ಟ್, ಆಶ್ಲೇ ವ್ಯಾನ್ ವೈಕ್, ಶನೆಲ್ ವೆಂಟರ್.