ಕೌಲಾಲಂಪುರ,ಫೆ.02(DaijiworldNews/TA): ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ನಡೆದ ಎರಡನೇ ಐಸಿಸಿ ಮಹಿಳಾ ಟಿ20 ವಿಶ್ವಕಪ್ನ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್ಗಳಿಂದ ಸೋಲಿಸಿ ಭಾರತ ಮಹಿಳಾ ಕ್ರಿಕೇಟ್ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಪಡೆಯಿತು. 2023ರ ಮೊದಲ ಆವೃತ್ತಿಯಲ್ಲೂ ಶೆಫಾಲಿ ವರ್ಮಾ ನಾಯಕತ್ವದಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದಿತ್ತು. ಇದೀಗ ಭಾರತ ತಂಡ ಸತತ ಎರಡನೇ ಬಾರಿಗೆ ಈ ಪ್ರಶಸ್ತಿಯನ್ನು ಗಳಿಸಿ ಇತಿಹಾಸ ಸೃಷ್ಟಿಸಿದೆ.

ಭಾರತ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಲು ಆಲ್ ರೌಂಡರ್ ಗೊಂಗಡಿ ತ್ರಿಶಾ ಅವರ ಪಾತ್ರವೇ ಬಹುಮುಖ್ಯವಾಗಿತ್ತು. 19 ವರ್ಷಗಳಿಂದಲೂ ಮೊದಲ ಟಿ20 ವಿಶ್ವಕಪ್ನಲ್ಲಿ ತ್ರಿಶಾ ಆಡಿದ್ದರೂ, ಆ ವೇಳೆ ಶೆಫಾಲಿ, ರಿಚಾ ಘೋಷ್ ಹಾಗೂ ಟೈಟಾಸ್ ಸಾಧು ಅವರೇ ಮುಖ್ಯ ನಾಯಕಿಯರು. ಆದರೂ, ಈ ಬಾರಿ ಚೊಚ್ಚಲ ಫೈನಲ್ನಲ್ಲಿ 44 ರನ್ ಗಳಿಸಿದ ತ್ರಿಶಾ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ತ್ರಿಶಾ ತಮ್ಮ ಆಲ್ ರೌಂಡರ್ ಪ್ರದರ್ಶನದ ಮೂಲಕ ಈ ಫೈನಲ್ ಪಂದ್ಯದಲ್ಲಿ ಮಿಂಚಿದರು. 44 ರನ್ ಗಳಿಸಿದ ನಂತರ, ಅವರು ಬೌಲಿಂಗ್ನಲ್ಲಿ 3 ವಿಕೆಟ್ಗಳನ್ನು ಪಡೆದರು, ಇದರೊಂದಿಗೆ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಈ ಟೂರ್ನಿಯಲ್ಲಿ 309 ರನ್ ಗಳಿಸಿ ಟಿ20 ವಿಶ್ವಕಪ್ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಆಗಿ ದಾಖಲೆ ನಿರ್ಮಿಸಿದ ತ್ರಿಶಾ, 7 ವಿಕೆಟ್ಗಳನ್ನು ಪಡೆದು ಬೌಲಿಂಗ್ನಲ್ಲಿಯೂ ಮ್ಯಾಜಿಕ್ ಸೃಷ್ಟಿಸಿದರು. ಈ ಅದ್ಭುತ ಪ್ರದರ್ಶನಕ್ಕಾಗಿ, ತ್ರಿಶಾಗೆ ಇಡೀ ಟೂರ್ನಿಯ ಉತ್ತಮ ಆಟಗಾರ್ತಿ ಪ್ರಶಸ್ತಿಯೂ ಲಭಿಸಿತು.