ಬೆಂಗಳೂರು, ಮಾ.02 (DaijiworldNews/AA): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಬಳಿ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಕ್ಷಮಾಪಣೆ ಕೋರಿದ್ದಾರೆ.

ಸ್ಮೃತಿ ಮಂಧಾನ ಅವರು ಕ್ಷಮೆಯಾಚಿಸಲು ಮುಖ್ಯ ಕಾರಣ ತಂಡದ ಕಳಪೆ ಪ್ರದರ್ಶನವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈ ಬಾರಿ ನಮಗೆ ಒಂದೇ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗಿಲ್ಲ. ಇದಾಗ್ಯೂ ಪ್ರತಿ ಬಾರಿ ಆರ್ಸಿಬಿ ಅಭಿಮಾನಿಗಳು ನಮ್ಮ ಬೆಂಬಲಕ್ಕೆ ನಿಂತಿದ್ದರು. ಅದಕ್ಕಾಗಿಯೇ ಆರ್ಸಿಬಿ ಫ್ಯಾನ್ಸ್ ವಿಶ್ವದ ಅತ್ಯುತ್ತಮ ಅಭಿಮಾನಿಗಳು ಎನಿಸಿಕೊಂಡಿರುವುದು ಎಂದಿದ್ದಾರೆ.
ನಮ್ಮ ಸೋಲಿನ ಹೊರತಾಗಿಯೂ ಆರ್ಸಿಬಿ ಅಭಿಮಾನಿಗಳು ತುಂಬಾ ಬೆಂಬಲ ನೀಡಿದ್ದಾರೆ. ಇದಾಗ್ಯೂ ನಮಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಂದು ಮ್ಯಾಚ್ ಕೂಡ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ನಾನು ಆರ್ಸಿಬಿ ಅಭಿಮಾನಿಗಳಿಗೆ ಕ್ಷಮೆಯಾಚಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಆರ್ಸಿಬಿ ತಂಡಕ್ಕೆ ಎರಡು ಪಂದ್ಯಗಳು ಬಾಕಿಯಿದ್ದು, ಈ ಮ್ಯಾಚ್ಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಮಾತ್ರ ಪ್ಲೆಆಫ್ಗೆ ಪ್ರವೇಶಿಸಬಹುದು. ಈ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸುವ ನಾವು ಆರ್ಸಿಬಿ ಅಭಿಮಾನಿಗಳು ಹೆಮ್ಮೆಪಡುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.