ನವದೆಹಲಿ, ಮಾ.17(DaijiworldNews/TA) : ಸೌತ್ ಆಫ್ರಿಕಾ ವೇಗಿ ಕಾರ್ಬಿನ್ ಬಾಷ್ಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಲೀಗಲ್ ನೋಟಿಸ್ ಕಳುಹಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಂಡಳಿಯೊಂದಿಗಿನ ಒಪ್ಪಂದದ ಬಾಧ್ಯತೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಾಷ್ಗೆ ಕಾನೂನು ನೋಟಿಸ್ ಜಾರಿ ಮಾಡಿದೆ.

ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ವಿರುದ್ಧ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪರ ಪಾದಾರ್ಪಣೆ ಮಾಡಿದ್ದ ಬಾಷ್, ಜನವರಿ 13 ರಂದು ಲಾಹೋರ್ನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಪ್ಲೇಯರ್ಸ್ ಡ್ರಾಫ್ಟ್ನ ಹತ್ತನೇ ಆವೃತ್ತಿಯ ಸಂದರ್ಭದಲ್ಲಿ ಪೇಶಾವರ್ ಝಲ್ಮಿ ಡೈಮಂಡ್ ವಿಭಾಗದಲ್ಲಿ ಆಯ್ಕೆಯಾದರು. ಈ ತಿಂಗಳ ಆರಂಭದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಮುಖ ಫ್ರಾಂಚೈಸಿ ಮುಂಬೈ ಇಂಡಿಯನ್ಸ್, ಗಾಯಗೊಂಡಿರುವ ದಕ್ಷಿಣ ಆಫ್ರಿಕಾದವರಾದ ಲಿಜಾದ್ ವಿಲಿಯಮ್ಸ್ ಬದಲಿಗೆ ಬಾಷ್ ಅವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿತು.
ಬಾಷ್ಗೆ ಅವರ ಏಜೆಂಟ್ ಮೂಲಕ ಕಾನೂನು ನೋಟಿಸ್ ನೀಡಲಾಗಿದೆ ಮತ್ತು ಆಟಗಾರನು ತನ್ನ ವೃತ್ತಿಪರ ಮತ್ತು ಒಪ್ಪಂದದ ಬದ್ಧತೆಗಳಿಂದ ಹಿಂದೆ ಸರಿದ ಕ್ರಮವನ್ನು ಸಮರ್ಥಿಸಿಕೊಳ್ಳಲು ಕೇಳಲಾಗಿದೆ.
ಕಾರ್ಬಿನ್ ಬಾಷ್ ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹಿಂದೆ ಸರಿದಿದ್ದಾರೆ. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ ಬಾಷ್ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಕಾರ್ಬಿನ್ ಬಾಷ್ ಅವರ ಈ ನಡೆಯಿಂದ ಸಿಟ್ಟುಗೊಂಡಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಇದೀಗ ಪಿಎಸ್ಎಲ್ನಿಂದ ಹಿಂದೆ ಸರಿಯಲು ಕಾರಣವೇನು ಎಂಬುದರ ಬಗ್ಗೆ ಸ್ಪಷ್ಟನೆಯನ್ನು ಕೋರಿದೆ ಎನ್ನಲಾಗಿದೆ.