ಮುಂಬೈ, ಮಾ.27 (DaijiworldNews/AA): ಐಪಿಎಲ್ನಲ್ಲಿ ಬ್ಯಾಟಿಂಗ್ ನಡೆಯುತ್ತಿರುವ ರೀತಿ ನೋಡಿದರೆ, ಶೀಘ್ರದಲ್ಲೇ ಪ್ರತಿಯೊಬ್ಬ ಬೌಲರ್ಗಳು ವೈಯಕ್ತಿಕ ಮನಃಶಾಸ್ತ್ರಜ್ಞರನ್ನು ನೇಮಿಸಿಕೊಳ್ಳಬೇಕಾಗಿ ಬರಬಹುದು ಎಂದು ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಿಳಿಸಿದ್ದಾರೆ.

ಸದ್ಯ ಐಪಿಎಲ್ ನಲ್ಲಿ ಬ್ಯಾಟರ್ ಗಳು ಹಾಗೂ ಬೌಲರ್ ಗಳ ಅಬ್ಬರ ಜೋರಾಗಿದೆ. ಇದನ್ನೇ ಪ್ರಸ್ತಾಪಿಸಿರುವ ಅಶ್ವಿನ್ ಐಪಿಎಲ್ ಸೇರಿದಂತೆ ಟಿ20 ಕ್ರಿಕೆಟ್ನಲ್ಲಿ ಬ್ಯಾಟರ್ಗಳ ಪರಾಕ್ರಮವು ಬೌಲರ್ಗಳ ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅಶ್ವಿನ್, ಟಿ20 ಕ್ರಿಕೆಟ್ ಬದಲಾಗಿರುವ ರೀತಿಯ ಬಗ್ಗೆ ಮಾತನಾಡಲು ನಾನು ಬಯಸುತ್ತೇನೆ. ಏಕೆಂದರೆ ಬೌಲರ್ಗಳಿಗೆ ರನ್ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದು ಅವರನ್ನು ಮಾನಸಿಕವಾಗಿ ಒತ್ತಡಕ್ಕೀಡು ಮಾಡುತ್ತದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಒತ್ತಡಗಳಿಂದಾಗಿ ಬೌಲರ್ಗಳಿಗೆ ಶೀಘ್ರದಲ್ಲೇ ವೈಯಕ್ತಿಕ ಮನಃಶಾಸ್ತ್ರಜ್ಞರು ಬೇಕಾಗಿ ಬರಬಹುದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಈಗ ಟಿ20 ಕ್ರಿಕೆಟ್ನಲ್ಲಿ ಬೌಲಿಂಗ್ ಅಕ್ಷರಶಃ ಅಸಾಧ್ಯವಾಗಿದೆ. ಕೆಲವು ಪಿಚ್?ಗಳು ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿ ಮಾರ್ಪಟ್ಟಿದೆ. ಇದರಿಂದ ಬೌಲರ್ಗಳು ನಿಷ್ಪ್ರಯೋಜಕರಾಗುತ್ತಿದ್ದಾರೆ ಎಂಬುದು ನನ್ನ ಭಾವನೆ. ಹೀಗಾಗಿ ಬೌಲರ್ಗಳ ಪಾಲಿಗೆ ಮನಃಶಾಸ್ತ್ರಜ್ಞರ ಅಗತ್ಯವಿದೆ ಎಂದು ಹೇಳಿದ್ದಾರೆ.