ಮುಂಬೈ, ಏ.19 (DaijiworldNews/AA): ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ಪರೀಕ್ಷಿಸಲು ಯೋ-ಯೋ ಟೆಸ್ಟ್ ನಡೆಸಲಾಗಿದ್ದು, ಈ ಟೆಸ್ಟ್ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಫೇಲ್ ಆಗಿದ್ದಾರೆ.

ಕೇಂದ್ರ ಒಪ್ಪಂದಗಳನ್ನು ಘೋಷಿಸುವ ಮೊದಲು, ಬಿಸಿಸಿಐ ಹಲವಾರು ಆಟಗಾರರನ್ನು ಫಿಟ್ನೆಸ್ ಪರೀಕ್ಷೆಗಳಿಗಾಗಿ ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಕಳುಹಿಸಿತ್ತು. ಈ ಪೈಕಿ ಇಶಾನ್ ಕಿಶನ್ ಕೂಡ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಈ ಪರೀಕ್ಷೆಯಲ್ಲಿ ಪಾಸ್ ಆಗಲು ಇಶಾನ್ ಕಿಶನ್ ವಿಫಲರಾಗಿದ್ದಾರೆ. ಇಶಾನ್ ಅವರ ಯೋ-ಯೋ ಪರೀಕ್ಷೆಯಲ್ಲಿ ಸುಮಾರು 15.2 ರಷ್ಟು ಸ್ಕೋರ್ ಗಳಿಸಿದ್ದರು. ಇದು ಬಿಸಿಸಿಐ ನಿಗದಿಪಡಿಸಿದ 16 ಸ್ಕೋರ್ಗಿಂತ ಕಡಿಮೆಯಾಗಿದೆ ಎಂದು ವರದಿಯಾಗಿದೆ.
ಬಿಸಿಸಿಐ ನಿಗದಿಪಡಿಸಿದ 16 ಸ್ಕೋರ್ಗಿಂತ ಹೆಚ್ಚು ಗಳಿಸಿದ ನಂತರವೇ ಆಟಗಾರನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆಂದು ಪರಿಗಣಿಸಲಾಗುತ್ತದೆ. ಆದರೆ ಇಶಾನ್ ಕಿಶನ್ ಅವರ ಸ್ಕೋರ್ ಇದಕ್ಕಿಂತ ತುಂಬಾ ಕಡಿಮೆಯಾಗಿದ್ದು, ಹೀಗಾಗಿ ಟೀಮ್ ಇಂಡಿಯಾಕ್ಕೆ ಮರಳುವ ಅವರ ಕನಸು ಕನಸಾಗೇ ಉಳಿಯುವ ಸಾಧ್ಯತೆ ಇದೆ.
ಇಶಾನ್ ಕಿಶನ್ ಯೋ-ಯೋ ಟೆಸ್ಟ್ನಲ್ಲಿ ಫೇಲ್ ಆಗಿರುವ ಕಾರಣ ಅವರನ್ನು ಕೇಂದ್ರೀಯ ಒಪ್ಪಂದದಲ್ಲಿ ಒಳಪಡಿಸುವ ಸಾಧ್ಯತೆಯಿಲ್ಲ. ಹೀಗಾಗೀ ಮುಂಬರುವ ಸರಣಿಗೂ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.