ಮುಂಬೈ, ಮೇ. 04 (DaijiworldNews/AK):ಮೇ 3 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸುವಲ್ಲಿ ತಂಡದ ವೇಗದ ಬೌಲರ್ ಯಶ್ ದಯಾಳ್ ಪ್ರಮುಖ ಪಾತ್ರವಹಿಸಿದರು.

ಕೊನೆಯ ಓವರ್ನಲ್ಲಿ ಸಿಎಸ್ಕೆ ಗೆಲುವಿಗೆ 15 ರನ್ಗಳ ಅವಶ್ಯಕತೆ ಇತ್ತು. ಸ್ಟ್ರೈಕ್ನಲ್ಲಿ ಗೇಮ್ ಫಿನಿಶರ್ ಖ್ಯಾತಿಯ ಧೋನಿ ಇದ್ದರೆ, ನಾನ್ ಸ್ಟ್ರೈಕ್ನಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದ ಜಡೇಜಾ ಇದ್ದರು. ಇಂತಹ ಸ್ಫೋಟಕ ದಾಂಡಿಗರಿದ್ದರೂ ಚೆನ್ನೈ ತಂಡಕ್ಕೆ ಗೆಲುವು ಸಿಗಲಿಲ್ಲ. ಇದೇ ರೀತಿಯ ಪ್ರದರ್ಶನವನ್ನು ಕಳೆದ ಸೀಸನ್ನಲ್ಲೂ ಇದೇ ಸಿಎಸ್ಕೆ ವಿರುದ್ಧ ಯಶ್ ದಯಾಳ್ ನೀಡಿದ್ದರು.
ಕಳೆದ ಸೀಸನ್ ಮ್ಯಾಚ್ನಲ್ಲೂ ಧೋನಿ ಹಾಗೂ ಜಡೇಜಾ ಕ್ರೀಸ್ನಲ್ಲಿದ್ದರೂ 17 ರನ್ಗಳ ಗುರಿಯನ್ನು ಈ ಇಬ್ಬರು ದಾಂಡಿಗರಿಗೆ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಒಂದು ಸಮಯದಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ಹೊಡಿಸಿಕೊಂಡು ವೃತ್ತಿಜೀವನಕ್ಕೆ ಕುತ್ತು ತಂದುಕೊಂಡಿದ್ದ ಯಶ್ ದಯಾಳ್ ಇದೀಗ ಆರ್ಸಿಬಿ ಪಾಲಿನ ಆಪತ್ಭಾಂದವರಾಗಿದ್ದಾರೆ. ದಯಾಳ್ ಅವರ ಈ ರೀತಿಯ ಬದಲಾವಣೆಗೆ ಕೊಹ್ಲಿಯೇ ಕಾರಣರೆಂದು ಅವರ ತಂದೆ ಹೇಳಿಕೊಂಡಿದ್ದಾರೆ.