ದೋಹಾ, ಮೇ. 17 (DaijiworldNews/AA): ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ದೋಹಾದಲ್ಲಿ ನಡೆದ ಡೈಮಂಡ್ ಲೀಗ್ ಕೂಟದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ನೀರಜ್ ಚೋಪ್ರಾ ಅವರು ಬರೋಬ್ಬರಿ 90.23 ಮೀಟರ್ ಜಾವೆಲಿನ್ ಎಸೆದಿದ್ದಾರೆ. ಈ ಮೂಲಕ ನೀರಜ್ ಚೋಪ್ರಾ ಅವರು ಜಾವೆಲಿನ್ ಕ್ರೀಡಾಕೂಟದಲ್ಲಿ ಅತೀ ದೂರ ಭರ್ಜಿ ಎಸೆದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2022 ರ ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ ನೀರಜ್ ಚೋಪ್ರಾ 89.94 ಮೀಟರ್ ಎಸೆದಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ ನೀರಜ್ ಚೋಪ್ರಾ ಅವರು ಬರೋಬ್ಬರಿ 90.23 ಮೀಟರ್ ಭರ್ಜಿ ಎಸೆಯುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಡೈಮಂಡ್ ಲೀಗ್ ಕೂಟದಲ್ಲಿ ಜರ್ಮನಿಯ ಜೂಲಿಯನ್ ವೆಬರ್ 91.06 ಮೀಟರ್ ದೂರದೊಂದಿಗೆ ಮೊದಲ ಸ್ಥಾನ ಗಳಿಸಿದರೆ, ನೀರಜ್ ಚೋಪ್ರಾ ಅವರು, 90.23 ಮೀಟರ್ನೊಂದಿಗೆ 2ನೇ ಸ್ಥಾನ ಅಲಂಕರಿಸಿದರು. ಗ್ರೆನೇಡಿಯನ್ ಆಂಡರ್ಸನ್ ಪೀಟರ್ಸ್ 85.64 ಮೀಟರ್ನೊಂದಿಗೆ ಮೂರನೇ ಸ್ಥಾನ ಪಡೆದರು.