ಲಂಡನ್, ಜೂ. 20 (DaijiworldNews/AK): ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್ ನಡುವಿನ ‘ಪಟೌಡಿ’ (ತೆಂಡೂಲ್ಕರ್-ಆ್ಯಂಡರ್ಸನ್ ಟ್ರೋಫಿ) ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಲಿದೆ. ಯುವ ಆಟಗಾರ ಶುಭಮನ್ ಗಿಲ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಟೀಂ ಇಂಡಿಯಾ ಹೊಸ ಅಧ್ಯಾಯಕ್ಕೆ ಬರೆಯಲು ಸಜ್ಜಾಗಿದೆ.

ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಶುರುವಾಗಲಿದೆ. ಮೊದಲ ಟೆಸ್ಟ್ ಪಂದ್ಯ ಹೆಡಿಂಗ್ಲೆ ಲೀಡ್ಸ್ ಮೈದಾನದಲ್ಲಿ ನಡೆಯಲಿದ್ದು, ಮಧ್ಯಾಹ್ನ 3:30ಕ್ಕೆ ಪಂದ್ಯ ಶುರುವಾಗಲಿದೆ. ಜೊಯೋ ಹಾಟ್ಸ್ಟಾರ್ ಒಟಿಟಿ, ಸೋನಿ ಸ್ಫೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ.
1971ರಲ್ಲಿ ಅಜಿತ್ ವಾಡೇಕರ್, 1986ರಲ್ಲಿ ಕಪಿಲ್ ದೇವ್ ಮತ್ತು 2007ರಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಭಾರತ ತಂಡ, ಮಾತ್ರ ಕಳೆದ 9 ದಶಕಗಳಲ್ಲಿ ಆಂಗ್ಲರ ನಾಡಿನಲ್ಲಿ ಟೆಸ್ಟ್ ಸರಣಿ ಗೆದ್ದಿದೆ.