ನವದೆಹಲಿ, ಜು. 19 (DaijiworldNews/TA): ಟಿ20 ಕ್ರಿಕೆಟ್ನಲ್ಲಿ 13 ಸಾವಿರ ರನ್ ಕಲೆಹಾಕಿದ ಇಂಗ್ಲೆಂಡ್ 2ನೇ ಬ್ಯಾಟರ್ ಹಾಗೂ ವಿಶ್ವದ 7ನೇ ಆಟಗಾರ ಎಂಬ ಹೆಗ್ಗಳಿಕೆಗೆ ಜೋಸ್ ಬಟ್ಲರ್ ಪಾತ್ರರಾಗಿದ್ದಾರೆ. ಬಟ್ಲರ್ಗೂ ಮುನ್ನ ಇಂಗ್ಲೆಂಡ್ನ ಅಲೆಕ್ಸ್ ಹೇಲ್ಸ್ (13814) ಟಿ20 ಕ್ರಿಕೆಟ್ನಲ್ಲಿ 13 ಸಾವಿರ ರನ್ ಕಲೆಹಾಕಿದ ಸಾಧನೆ ಮಾಡಿದ್ದರು.

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ 13000 ಸಾವಿರ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಗೆ ಬಟ್ಲರ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಜೋಸ್ ಬಟ್ಲರ್, ಯಾರ್ಕ್ಶೈರ್ ವಿರುದ್ಧದ ಪಂದ್ಯದಲ್ಲಿ 46 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 77 ರನ್ ಬಾರಿಸಿದ್ದಾರೆ. ಈ ಎಪ್ಪತ್ತೇಳು ರನ್ಗಳೊಂದಿಗೆ ಬಟ್ಲರ್ ಟಿ20 ಕ್ರಿಕೆಟ್ನಲ್ಲಿ 13 ಸಾವಿರ ರನ್ ಪೂರೈಸಿ ದಾಖಲೆ ನಿರ್ಮಿಸಿದ್ದಾರೆ.
ಈವರೆಗೆ 432 ಟಿ20 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಬಟ್ಲರ್ 8946 ಎಸೆತಗಳನ್ನು ಎದುರಿಸಿದ್ದು, ಈ ವೇಳೆ 8 ಶತಕ ಹಾಗೂ 93 ಅರ್ಧಶತಕಗಳೊಂದಿಗೆ ಒಟ್ಟು ಜೋಸ್ ಬಟ್ಲರ್ 13055 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ 7ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.